ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎಂಎಸ್ಸಿ ವಿದ್ಯಾರ್ಥಿನಿ ಕಾರು ಅಪಘಾತದಲ್ಲಿ ಸಾವು

ಎಂಎಸ್ಸಿ ವಿದ್ಯಾರ್ಥಿನಿ ಕಾರು ಅಪಘಾತದಲ್ಲಿ ಸಾವು

 


ಹಾಸನ: ರಸ್ತೆ ಅಪಘಾತದಲ್ಲಿ ಎಂಎಸ್​ಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆಯೊಂದು ಚನ್ನರಾಯಪಟ್ಟಣ ತಾಲೂಕಿನ ರಾಚೇನಹಳ್ಳಿ ಗೇಟ್ ಬಳಿ ನಡೆದಿದೆ.


 ಪೂಜಾ 21 ವರ್ಷ ಮೃತ ದುರ್ದೈವಿ. ಮೃತ ಪೂಜಾ ಮೈಸೂರಿನಲ್ಲಿ ಎಂಎಸ್​ಸಿ ವ್ಯಾಸಂಗ ಮಾಡುತ್ತಿದ್ದು, ನಿನ್ನೆ ಪರೀಕ್ಷೆಯಿದ್ದ ಕಾರಣ ಮೈಸೂರಿಗೆ ತೆರಳಿ ವಾಪಾಸ್ಸಾಗಿದ್ದರು. 


ತಡವಾದ ಕಾರಣ ಚನ್ನರಾಯಪಟ್ಟಣಕ್ಕೆ ತಂದೆಗೆ ಕರೆ ಮಾಡಿದ್ದರು. ಪೂಜಾ ಹಾಗೂ ಅವರ ತಂದೆ ವಾಪಾಸ್ಸಾಗುವ ವೇಳೆ ಹಿಂದಿನಿಂದ ಬಂದ ಕಾರು ಡಿಕ್ಕಿಯಾಗಿದೆ.


 ತಂದೆ ಮಗಳು ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪೂಜಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.


ಮನೆಯಿಂದ 500 ಮೀಟರ್​ ಅಂತರದಲ್ಲಿಯೇ ಅಪಘಾತ ಸಂಭವಿಸಿದ್ದು, ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


 ಕಾರು ಚಾಲಕನ ನಿರ್ಲಕ್ಷ್ಯತನವೇ ಈ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.


ಈ ಘಟನೆ ಬಗ್ಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 تعليقات

إرسال تعليق

Post a Comment (0)

أحدث أقدم