ಬೀದರ್ : ಕೋವಿಡ್ ಸೋಂಕಿನಿಂದ ಮಂಗಳವಾರ ಜುಲೈ.06 ಪೊಲೀಸ್ ಮುಖ್ಯ ಪೇದೆ ರಮೇಶ ಲಕ್ಷ್ಮಣ (45) ವರ್ಷದವರು ಮೃತ ಪಟ್ಟಿದ್ದಾರೆ.
ಧನ್ನೂರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 112 ತುರ್ತು ಸೇವಾ ವಾಹನ (ಇ.ಆರ್.ಎಸ್.ಎಸ್) ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಕೋವಿಡ್ ಪಾಸಿಟಿವ್ ಆಗಿದ್ದು ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆಯಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ.
ಬಸವಕಲ್ಯಾಣ ತಾಲೂಕಿನ ಧನ್ನೂರ್ ಗ್ರಾಮದ ಮೃತ ರಮೇಶ ಅವರ ಪತ್ನಿ ಸಹ ಪೇದೆಯಾಗಿದ್ದು, ಪತ್ನಿ, ಮೂವರು ಮಕ್ಕಳು ಇದ್ದಾರೆ.
Post a Comment