ಮಂಗಳೂರು: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿಯವರ ಅವಿರತ ಶ್ರಮದಿಂದ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯ ಅಡಿಯಲ್ಲಿ ಸುಮಾರು ಮೂರೂವರೆ ಕೋಟಿ ಅನುದಾನದಿಂದ ರಸ್ತೆ ನಿರ್ಮಾಣ ಕಾರ್ಯವು ಸುಸೂತ್ರವಾಗಿ ಕೊನೆಗೊಂಡಿರುತ್ತದೆ.
ಈ ರಸ್ತೆಯು ಕೊಳಂಬೆ ಶಾಲೆಯಿಂದ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನವರೆಗೆ ಇರುತ್ತದೆ. ಗ್ರಾಮಸಡಕ್ ಯೋಜನೆಯ ಅಡಿಯಲ್ಲಿ ನಿರ್ಮಾಣವಾದ ಈ ರಸ್ತೆಯ ಇಕ್ಕೆಲಗಳಲ್ಲಿ ಹಸಿರು ಸದಾ ನಳನಳಿಸುತ್ತಿರುವ ಉದ್ದೇಶದಿಂದ ಅರಣ್ಯ ಇಲಾಖೆಯ ವತಿಯಿಂದ ಸುಮಾರು 350 ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಶನಿವಾರ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ವರೆಗೆ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ವಿಶ್ವನಾಥ ಶೆಟ್ಟಿ, ಪಂಚಾಯತ್ ಅಧ್ಯಕ್ಷರಾದ ಉಮೇಶ್ ಕುಲಾಲ್, ಪಂಚಾಯತ್ ಸದಸ್ಯರುಗಳು, ಅರಣ್ಯ ಇಲಾಖೆ ಅಧಿಕಾರಿಯಾಗಿರುವ ಶ್ರೀಧರ್, ನಿರಂಜನ ಸ್ವಾಮಿ ಶಾಲೆಯ ವ್ಯವಸ್ಥಾಪಕರಾಗಿರುವ ನಾರಾಯಣ ಪೂಜಾರಿ, ಪಕ್ಷದ ಮಂಡಲ ವಿವಿಧ ಜವಾಬ್ದಾರಿಗಳನ್ನು ಹೊಂದಿರುವ ಪ್ರಮುಖರಾದ ಶ್ರೀಮತಿ ಅಮೃತ್ ಲಾಲ್ ಜೋಯ್ಸ್ ಡಿ' ಸೋಜಾ, ಸುಧಾಕರ್ ಕೊಳಂಬೆ, ಸುಖೇಶ್ ಮಾಣೈ, ಕಾರ್ಯಕರ್ತರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment