ನೆಲ್ಯಾಡಿ : ಇಲ್ಲಿಯ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಲಾರಿಗಳಿಂದ ಬ್ಯಾಟರಿಗಳನ್ನು ಕಳವುಗೈದ ಘಟನೆಯೊಂದು ನೆಲ್ಯಾಡಿ ಸಮೀಪದ ದೋಂತಿಲದಲ್ಲಿ ಮಂಗಳವಾರ ಬೆಳಿಗ್ಗೆ ಮಾಹಿತಿ ತಿಳಿದು ಬಂದಿದೆ.
ದೋಂತಿಲ ಎಂಬಲ್ಲಿ ಅಬ್ಬಾಸ್ ಹಾಗೂ ಅಶ್ರಫ್ ಎಂಬವರಿಗೆ ಸೇರಿದ ಎರಡು ಲಾರಿಗಳಿಂದ ಬ್ಯಾಟರಿಗಳನ್ನು ಕಳವು ಮಾಡಲಾಗಿದೆ.
ಕಳೆದ ಹಲವು ಸಮಯಗಳ ಹಿಂದೆ ನೆಲ್ಯಾಡಿ ಪರಿಸರದಲ್ಲಿ ಬ್ಯಾಟರಿ ಕಳವು ನಿರಂತರ ನಡೆಯುತ್ತಿತ್ತು. ಇದೀಗ ಸುಮ್ಮನಿದ್ದ ಕಳ್ಳರು ಮತ್ತೆ ತಮ್ಮ ಕೈಚಳಕವನ್ನು ತೋರಿಸಿದ್ದಾರೆ.
إرسال تعليق