ಮೈಸೂರು: ಗಂಡನ ಕಿರುಕುಳ ಸಹಿಸಲಾಗದೆ ತವರು ಮನೆಯಲ್ಲೇ ಇದ್ದ ಯುವತಿ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಂಜನಗೂಡು ತಾಲೂಕಿನ ಬಿಳಿಗೆರೆಯ ಸೌಮ್ಯಾ(26) ವರ್ಷ ಮೃತ ಯುವತಿ. ಸೌಮ್ಯಾಗೆ 3 ವರ್ಷಗಳ ಹಿಂದೆ ಮೈಸೂರಿನ ಆಲನಹಳ್ಳಿ ನಿವಾಸಿ ಗೌತಮ್ ಎಂಬಾತನ ಜೊತೆ ವಿವಾಹವಾಗಿತ್ತು.
ಸಾಲ ಮಾಡಿ ಆಕೆಯ ಮದುವೆಯನ್ನು ಅದ್ದೂರಿಯಾಗಿಯೇ ಮಾಡಿ, ಮಗಳಿಗೆ ಕೈಲಾದಷ್ಟು ಚಿನ್ನಾಭರಣವನ್ನೂ ಕೊಟ್ಟಿದ್ದರು.
ಆದರೂ ಮದುವೆಯಾದಗಿಂದ ವರದಕ್ಷಿಣೆ ತರುವಂತೆ ಸೌಮ್ಯಾಗೆ ಗಂಡ ಮತ್ತು ಆತನ ಮನೆಯವರು ಕಿರುಕುಳು ಕೊಡುತ್ತಿದ್ದು, ಇದನ್ನು ಸಹಿಸಲಾಗದೆ ಸೌಮ್ಯಾ 6 ತಿಂಗಳ ಹಿಂದೆಯೇ ತವರು ಮನೆ ಸೇರಿದ್ದಳು.
ಇದೀಗ ತವರು ಮನೆಯಲ್ಲೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇಷ್ಟಕ್ಕೆ ಸುಮ್ಮನೆ ಇರದ ಗಂಡ ಗೌತಮ್, ಸೌಮ್ಯಾಳ ಮೊಬೈಲ್ಗೆ ಕಾಲ್ ಮಾಡಿ ನಿಂದಿಸುತ್ತಿದ್ದ ಪದೇಪದೆ ಹಣಕ್ಕಾಗಿ ಪೀಡಿಸುತ್ತಿದ್ದು, ಮತ್ತೆ ಒಂದು ಲಕ್ಷ ರೂ. ಕೊಡುವಂತೆ ಕೇಳುತ್ತಿದ್ದ.
ಗಂಡ ಮತ್ತು ಅತ್ತೆ ಕಿರುಕುಳ ಸಹಿಸಲಾಗದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ಕೆಂಪಮ್ಮ ಆರೋಪಿಸಿದ್ದಾರೆ.
ಈ ಬಗ್ಗೆ ನಂಜನಗೂಡಿನ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment