ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಡಿಪು; ಗ್ರಾಮ ಸಹಾಯಕ ನಿತಿನ್ ಶೆಟ್ಟಿ ಆತ್ಮಹತ್ಯೆ

ಮುಡಿಪು; ಗ್ರಾಮ ಸಹಾಯಕ ನಿತಿನ್ ಶೆಟ್ಟಿ ಆತ್ಮಹತ್ಯೆ

 


ಮುಡಿಪು: ಇಲ್ಲಿನ ಗ್ರಾಮ ಸಹಾಯಕ (ಉಗ್ರಾಣಿ) ತನ್ನ ಮನೆಯಲ್ಲಿ ಗುರುವಾರ ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಅಂಬ್ಲಮೊಗರುವಿನ ಪಡ್ಯಾರಮನೆ ಗುತ್ತಿನ ನಿತಿನ್ ಶೆಟ್ಟಿ (34) ವರ್ಷ ಮೃತರು.


ಮದಕದಲ್ಲಿರುವ ತನ್ನ ನಿವಾಸದ ಮಾಲಿಗೆಯಲ್ಲಿ ಬೆಡ್‌ರೂಮಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಹಲವು ವರ್ಷದಿಂದ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.


ನಿತಿನ್ ಅವರು ಮೂರು ವರ್ಷದ ಹಿಂದಷ್ಟೆ ಮದುವೆಯಾಗಿದ್ದು, ಗುರುವಾರ ಬೆಳಿಗ್ಗೆ ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಕುತ್ತಾರಿನವರೆಗೆ ಕೆಲಸಕ್ಕೆ ಬಿಟ್ಟು ಬಂದಿದ್ದರು. 


ಬಳಿಕ ಮನೆಗೆ ಹಿಂತಿರುಗಿದ ನಿತಿನ್ ನೇಣಿಗೆ ಶರಣಾಗಿದ್ದಾರೆ. ಬೆಳಿಗ್ಗೆ 9.30 ವರೆಗೂ ಕೊಣೆಯಿಂದ ಹೊರಗೆ ಬರದೇ ಇದ್ದಾಗ ಅನುಮಾನಗೊಂಡ ತಾಯಿ ಹೋಗಿ ನೋಡಿದಾಗ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕೋಣಾಜೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.


0 تعليقات

إرسال تعليق

Post a Comment (0)

أحدث أقدم