ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಐವರ್ನಾಡು ಕಾಣೆಯಾದ ಯುವತಿ ಪತ್ತೆ

ಐವರ್ನಾಡು ಕಾಣೆಯಾದ ಯುವತಿ ಪತ್ತೆ

 


ಸುಳ್ಯ ; ತಾಲೂಕಿನ ಐವರ್ನಾಡು ಗ್ರಾಮದ ಕೊಯಿಲ ಇಲ್ಲಿನ ಯುವತಿಯೊಬ್ಬಳು ಮನೆಯಿಂದ ಕಾಣೆಯಾಗಿದ್ದು ಇಂದು ಮರಳಿ ಮನೆಗೆ ಬಂದಿರುವುದಾಗಿ ತಿಳಿದು ಬಂದಿದೆ.


ಕೊಯಿಲ ಎಂಬಲ್ಲಿನ ಶ್ರೀಕಲಾ ಎಂಬ ಯುವತಿ ಜು.5 ರಂದು ಮನೆಯಿಂದ ಬೆಳ್ಳಾರೆ ಪೇಟೆಯಲ್ಲಿನ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ಹೇಳಿ ಹೋದಾಕೆ, ಮನೆಗೆ ಹಿಂತಿರುಗಿ ಬಾರದೆ ಇದ್ದುದರಿಂದ ಈ ಬಗ್ಗೆ ಯುವತಿಯ ತಂದೆ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.


ಇದೀಗ ಯುವತಿಯು ಚೆನ್ನೈನ ಈಶ ಆಧ್ಯಾತ್ಮಿಕ ಸಂಸ್ಥೆಯೊಂದಕ್ಕೆ ಸೇರಲು ಚೆನ್ನೈಗೆ ರೈಲಿನಲ್ಲಿ ಹೋಗಿದ್ದು ಅಲ್ಲಿನ ಸಂಸ್ಥೆಯವರು ಮನೆಯವರು ಯಾರೂ ಇಲ್ಲದೆ ನಿಮ್ಮನ್ನು ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದ ಕಾರಣ ಯುವತಿಯು  ಮನೆಗೆ ವಾಪಸ್ಸು ಹಿಂತಿರುಗಿದಳೆನ್ನಲಾಗಿದೆ.


ಬಳಿಕ ತಂದೆಯ ಜೊತೆ ಬೆಳ್ಳಾರೆ ಪೊಲೀಸ್ ಠಾಣೆಗೆ ಹೋಗಿ ತನಗೆ ಆಧ್ಯಾತ್ಮಿಕದ ಬಗ್ಗೆ ಒಲವು ಇದ್ದುದರಿಂದ ನಾನು ಮನೆಯವರಲ್ಲಿ ಹೇಳದೆ ಚೆನ್ನೈ ಗೆ ಹೋಗಿರುವುದಾಗಿ ತಿಳಿಸಿದ್ದಾರೆಂದು ಮಾಹಿತಿ ತಿಳಿದು ಬಂದಿದೆ.

0 Comments

Post a Comment

Post a Comment (0)

Previous Post Next Post