ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೊಬೈಲ್‌ ಶೋರೂಂನಿಂದ ಭಾರೀ ಕಳವು: ಸಿಸಿಟಿವಿ ಹಾರ್ಡ್‌ ಡಿಸ್ಕನ್ನೂ ಹೊತ್ತೊಯ್ದ ಚಾಲಾಕಿ ಕಳ್ಳರು

ಮೊಬೈಲ್‌ ಶೋರೂಂನಿಂದ ಭಾರೀ ಕಳವು: ಸಿಸಿಟಿವಿ ಹಾರ್ಡ್‌ ಡಿಸ್ಕನ್ನೂ ಹೊತ್ತೊಯ್ದ ಚಾಲಾಕಿ ಕಳ್ಳರು


ಮಂಗಳೂರು: ಮಂಗಳೂರಿನ ಮೊಬೈಲ್ ಶೋರೂಂ ನಲ್ಲಿ ಭಾರೀ ಕಳ್ಳತನ ನಡೆದಿದೆ. ನಗರದ ಬಲ್ಮಠದಲ್ಲಿರುವ ಮೇಪಲ್ ಶೋರೂಂನಲ್ಲಿ ಈ ಘಟನೆ ನಡೆದಿದೆ.


ಹಿಂಬದಿಯ ಕಿಟಕಿಯ ಸರಳುಗಳನ್ನು ಮುರಿದು ಒಳ ನುಗ್ಗಿರುವ ಕಳ್ಳರು ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಆ್ಯಪಲ್ ಐ ಫೋನ್‌ಗಳನ್ನು ಕಳವು ಮಾಡಿದ್ದಾರೆ.


ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ನಡೆದಿರುವ ಕಳ್ಳತನವಾಗಿದ್ದು, ಇಂದು ಶೋರೂಂ ಓಪನ್ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ.


ಚಾಲಾಕಿ ಕಳ್ಳರು ಶೋರೂಂ ಒಳಗಿರುವ ಸಿಸಿಟಿವಿ ಕ್ಯಾಮರದ ಹಾರ್ಡ್ ಡಿಸ್ಕ್‌ ಅನ್ನೂ ಹೊತ್ತೊಯ್ದಿದ್ದಾರೆ. ಶೋರೂಂ ಬಗ್ಗೆ ಸಾಕಷ್ಟು ಗೊತ್ತಿದ್ದವರಿಂದಲೇ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.


ಐ ಫೋನ್ ಗಳೊಂದಿಗೆ ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ಲಕ್ಷಾಂತರ ರೂ ಮೌಲ್ಯದ ಸಾಧನಗಳನ್ನು ಕಳ್ಳರು ದೋಚಿದ್ದಾರೆ.


ಕದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರ ತಂಡ ಕೂಡ ಶೋರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 Comments

Post a Comment

Post a Comment (0)

Previous Post Next Post