ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಮಯದಲ್ಲಿ ಅರ್ಕುಳಬೈಲ್ ನಿಂದ ಹರಿದು ಹೋಗುವ ನೀರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸದ ಮತ್ತು ರೈಲ್ವೆ ಇಲಾಖೆಯ ನೀರು ಹರಿದು ಹೋಗುವ ಮೋರಿಗಳು ಮಣ್ಣಿನಿಂದ ತುಂಬಿದ ಕಾರಣ ಕೃಷಿ ಭೂಮಿಯಲ್ಲಿ ನೀರು ತುಂಬಿ ಕೖಷಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಅರ್ಕುಳಬೈಲ್‌ಗೆ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಇಲಾಖೆಯ ಆಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಗಳನ್ನು ತುರ್ತಾಗಿ ಸರಿಪಡಿಸಿ, ಈ ಭಾಗದ ಜನರ ಬೇಡಿಕೆಗೆ ಸ್ವಂದಿಸುವಂತೆ ಸೂಚನೆಗಳನ್ನು ನೀಡಿದ್ದಾರೆ.
ಅರ್ಕುಳಬೈಲ್ ಮುಖ್ಯ ರಸ್ತೆ ಮತ್ತು ಆಡ್ಡರಸ್ತೆಯನ್ನು ಕಾಲುನಡಿಗೆ ಮೂಲಕ ವೀಕ್ಷಿಸಿ ಅದನ್ನು ಕೂಡಾ ಅತೀ ಶೀಘ್ರದಲ್ಲಿ ಸರಿಪಡಿಸುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಸಂತೋಷ್ ಕುಮಾರ್ ತುಪ್ಪೆಕಲ್ಲು, ಮಂಡಲ ಫಲಾನುಭವಿ ಪ್ರಕೋಷ್ಟದ ಸದಸ್ಯರಾದ ಅಶೋಕ ಕೊಟ್ಟಾರಿ, ವಾರ್ಡಿನ ಆದ್ಯಕ್ಷರಾದ ರಘನಾಥ ಪೂಜಾರಿ, ಅರ್ಕುಳ ಶಕ್ತಿ ಕೇಂದ್ರ ಪ್ರಮುಖರಾದ ಜಯರಾಮ್ ಶೆಟ್ಟಿಗಾರ್, ಜಗದೀಶ್ ಅರ್ಕುಳ, ವಾರ್ಡಿನ ಕಾರ್ಯದರ್ಶಿಯಾದ ನವೀನ್ ಕೊಟ್ಟಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ನಾಯ್ಕ್, ಸುಚಿತ್ರ, ಮಾಜಿ ಸದಸ್ಯರಾದ ಸುಕುಮಾರ್ ಕರ್ಕೇರ, ಅರ್ಕುಳ 1ನೇ ವಾರ್ಡಿನ ಆಧ್ಯಕ್ಷರಾದ ಚಂದ್ರಹಾಸ ಕುಚ್ಚೂರು, ಹಿರಿಯರಾದ ಲೋಕಯ್ಯ ಪೂಜಾರಿ, ಪ್ರಮುಖರಾದ ವೇದಾವತಿ, ಸುರೇಶ್, ಕಿರಣ್, ಸುನೀಲ್, ಮನೋಜ್, ಪ್ರಶಾಂತ್ ಕಿಶೋರ್ ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment