ಮಂಗಳೂರು: ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಅರ್ಕುಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ತುಪ್ಪೆಕಲ್ಲು ಶ್ರೀ ಹನುಮಾನ್ ಸಭಾಭವನದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರಿಂದ ಆಹಾರ ಸಾಮಗ್ರಿ ಕಿಟ್ ವಿತರಣೆ ಮಂಗಳವಾರ ನಡೆಯಿತು. ಅರ್ಕುಳ ಗ್ರಾಮದ ಒಟ್ಟು 125 ಜನ ಕಿಟ್ ಪಡೆದರು.
ಪಂಚಾಯತ್ ಸದಸ್ಯರಾದ ನವೀನ್ ಶೆಟ್ಟಿ ತುಪ್ಪೆಕಲ್ಲು, ಪ್ರವೀಣ್ ಕುಮಾರ್, ಆಶಾ ಪ್ರಕಾಶ್, ಸುಚಿತ್ರ, ಗೀತಾ, ಪ್ರಮುಖರಾದ ಸಂತೇೂಷ್ ಕುಮಾರ್ ತುಪ್ಪೆಕಲ್ಲು, ತಿಲಕ್ ರಾಜ್, ಸಚಿನ್, ಜಯಪ್ರಕಾಶ್ ಶೆಟ್ಟಿ, ಜಯಂತ್, ಪುನೀತ್ ಸೇಮಿತ, ಜಯರಾಮ್ ಶೆಟ್ಟಿಗಾರ್, ಜಗದೀಶ್ ಅರ್ಕುಳ, ಅಂಗನವಾಡಿ ಮೇಲ್ವಿಚಾರಕಾರದ ಪದ್ಮಾವತಿ, ಆಶಾ ಕಾರ್ಯಕರ್ತೆಯರಾದ ಪ್ರಮೀಳ, ಜಯಲಕ್ಷ್ಮಿ ಉಪಸ್ಥಿತರಿದ್ದರು. ಮನೇೂಜ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment