ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಅನುಭವದ ಭಾವಗಳು ಅನಾವರಣವಾದಾಗ ಕವಿತೆಗೆ ಆಭರಣ': ವಿಜಯಲಕ್ಷ್ಮೀ ಕಟೀಲು

'ಅನುಭವದ ಭಾವಗಳು ಅನಾವರಣವಾದಾಗ ಕವಿತೆಗೆ ಆಭರಣ': ವಿಜಯಲಕ್ಷ್ಮೀ ಕಟೀಲು


ಮಂಗಳೂರು: 'ಸಂಸಾರ ಧ್ಯಾನದಲ್ಲಿರುವ ಹೆಣ್ಣು ಸಂಸಾರದ ಹೊರಗೂ ಜ್ಞಾನಿಯಾಗಿರಬಲ್ಲವಳು ಎಂಬುದು ಸಾಹಿತ್ಯ ಕ್ಷೇತ್ರದಲ್ಲಿ ಸಾಬೀತಾಗಿದೆ. ಕವಿತೆಗಳು ಕವಿ ಅಥವಾ ಕವಯಿತ್ರಿ ಹಡೆವ ಕೂಸು. ಕವಿತೆಯಲ್ಲಿ ಅನುಭವದ ಭಾವಗಳು ಅನಾವರಣವಾದಾಗ ಕವಿತೆಗಳು ಆಭರಣಗಳಾಗುತ್ತವೆ' ಎಂದು ಕವಯಿತ್ರಿ, ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು ಅಭಿಪ್ರಾಯ ಪಟ್ಟರು.


ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಭಾನುವಾರ ನಂಜನಗೂಡು ತಿರುಮಲಾಂಬಾ ವೇದಿಕೆಯಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ಕವಿಗೋಷ್ಠಿ 'ಕಾವ್ಯ ಸಿಂಧೂರ'ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


'ಗೋಷ್ಠಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕವಯಿತ್ರಿಯರೂ ಪರಸ್ಪರ ಮೀರಿಸುವಂತಹ ಪ್ರೌಢ ಕವನಗಳನ್ನು ಪ್ರಸ್ತುತ ಪಡಿಸಿದ್ದಾರೆ. ಒಂದೇ ಕಾರ್ಯಕ್ರಮದಲ್ಲಿ ಎಲ್ಲರೂ ಪ್ರಬುದ್ಧ ಸಾಹಿತ್ಯವನ್ನು ಸಾದರ ಪಡಿಸುವುದು ಅಪರೂಪ. ಹಾಗಾಗಿ ಈ ಕಾವ್ಯ ಸಿಂಧೂರ ವೈಶಿಷ್ಟ್ಯಪೂರ್ಣವಾಗಿದೆ ಎಂದರು.


ಹಿರಿಯ ಸಾಹಿತಿ ಡಾ.ಮೀನಾಕ್ಷಿ ರಾಮಚಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ 'ಕಾವ್ಯ ಸಿಂಧೂರ ಒಂದು ಅತ್ಯುತ್ತಮ ಪರಿಕಲ್ಪನೆ. ಇಂತಹ ಕಾರ್ಯಕ್ರಮ ಆಯೋಜಿಸಿ ಪರಿಷತ್ತು ತನ್ನ ಸೃಜನಶೀಲತೆಯನ್ನು ತೋರಿಸಿದೆ' ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.


ದಕ್ಷಿಣ ಕನ್ನಡ ಚುಸಾಪ ಜಿಲ್ಲಾಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು.


ಇದಕ್ಕೂ ಮುನ್ನ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಆಶಯ ಭಾಷಣದಲ್ಲಿ 'ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ನಿರಂತರ ಸಾಹಿತ್ಯ ಸೇವೆ ಮಾಡಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ಗಂಡು ಹೆಣ್ಣು ಎಂಬ ತಾರತಮ್ಯ ಇಲ್ಲ. ಆದರೆ ಕವಯತ್ರಿಯರಿಗೆ ವಿಶೇಷ ಮೀಸಲು ಕಾರ್ಯಕ್ರಮವಾಗಿ ಕಾವ್ಯ ಸಿಂಧೂರವನ್ನು ಆಯೋಜಿಸಲಾಗಿದೆ' ಎಂದು ಹೇಳಿದರು. ಕವಿ ವಿಘ್ನೇಶ್ ಭಿಡೆ 19ನೇ ಶತಮಾನದ ಮೊದಲ ಕವಿಯಿತ್ರಿ ಹೋರಾಟಗಾರ್ತಿ, ಪತ್ರಕರ್ತೆ ನಂಜನಗೂಡು ತಿರುಮಲಾಂಬಾ  ಅವರ ಕುರಿತು ಉಪಯುಕ್ತ ಮಾಹಿತಿಗಳನ್ನು ನೀಡಿದರು.


ಅಮೆರಿಕಾದ ಮೇರಿಲ್ಯಾಂಡ್ ನಿಂದ ಫಣಿಶ್ರೀ ನಾರಾಯಣನ್, ಮುಂಬೈನಿಂದ ಶಾರದಾ ಎ. ಅಂಚನ್, ಅಕ್ಷಯ ಆರ್ ಶೆಟ್ಟಿ ಮಂಗಳೂರು, ಪಾರ್ವತಿ ಜೋರಾಪುರ್ ಮಠ್, ವಿಜಯಪುರ, ನವಿ ಮುಂಬೈ ನಿಂದ ರಶ್ಮಿ ಭಟ್ ಕಾಘರ್, ಹೆಸರಾಂತ ವಾಗ್ಮಿ ಸಾಹಿತಿ ಡಾ. ಶುಭಾ ಮರವಂತೆ, ಯುವ ಕವಯಿತ್ರಿ ಶಮೀಮಾ ಕುತ್ತಾರ್, ಹಿರಿಯ ಕವಿಯಿತ್ರಿ ಮರೋಳಿ ಸಬೀತಾ ಕಾಮತ್, ಪತ್ರಕರ್ತೆ ಲೇಖಕಿ ವಿದ್ಯಾ ಗಣೇಶ್ ಕಾಸರಗೋಡು, ಹಿರಿಯ ಸಾಹಿತಿ ಸತ್ಯವತಿ ಭಟ್ ಕೊಳಚಪ್ಪು, ಎನ್. ಆರ್. ರೂಪಶ್ರೀ ಮೈಸೂರು, ಲೇಖಕಿ ನಳಿನಾಕ್ಷಿ ಉದಯರಾಜ್, ಶಿಕ್ಷಕಿ ಕವಯಿತ್ರಿ ಸುಪ್ರಿಯ ಮಂಗಳೂರು, ನಿರ್ಮಲಾ ಶೇಷಪ್ಪ ಖಂಡಿಗೆ, ಸಾಹಿತಿ ಮಲ್ಲಿಕಾ ಜೆ ರೈ ಪುತ್ತೂರು, ಲೇಖಕಿ ಶೈಲಜಾ ಪುದುಕೋಳಿ, ಹೈದರಾಬಾದ್ ನಿಂದ ವಿಜಯಲಕ್ಷ್ಮೀ ಅಶೋಕ್ ಬಸವ, ಅಸುಂತಾ ಡಿಸೋಜಾ ಮಂಗಳೂರು ಮತ್ತು ವೈಭವಿ ಸುರತ್ಕಲ್ ತಮ್ಮ ಪ್ರಬುದ್ಧ ಕವನಗಳನ್ನು ವಾಚನ ಮಾಡಿ ಮೆಚ್ಚುಗೆಗೆ ಪಾತ್ರರಾದರು.


ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಸದಸ್ಯೆ ಆಕೃತಿ ಐಎಸ್ ಭಟ್ ಸ್ವಾಗತಿಸಿದರು. ಹಿರಿಯ ಸಾಹಿತಿ ಅರುಂಧತಿ ರಾವ್ ವಂದಿಸಿದರು. ಜನಪ್ರಿಯ ಕಾರ್ಯಕ್ರಮ ನಿರೂಪಕಿ ಡಾ.ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم