ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಸರಗೋಡಿನ ಹಿರಿಯ ವೈದ್ಯ, ಮಕ್ಕಳ ತಜ್ಞ ಡಾ.ಪಿ.ಎಸ್. ನರಸಿಂಹ ಭಟ್ ನಿಧನ

ಕಾಸರಗೋಡಿನ ಹಿರಿಯ ವೈದ್ಯ, ಮಕ್ಕಳ ತಜ್ಞ ಡಾ.ಪಿ.ಎಸ್. ನರಸಿಂಹ ಭಟ್ ನಿಧನ

 



ಕಾಸರಗೋಡು: ಕಾಸರಗೋಡಿನ ಹಿರಿಯ ವೈದ್ಯರು, ಮಕ್ಕಳ ತಜ್ಞರೂ ಆಗಿದ್ದ ಡಾ. ಪಿ.ಎಸ್ ನರಸಿಂಹ ಭಟ್ ಅವರು ಇಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.


ಸುಮಾರು ನಾಲ್ಕು ದಶಕಗಳ ವೈದ್ಯಕೀಯ ಸೇವೆಯಲ್ಲಿ ಅಪಾರ ಜನಪ್ರಿಯರಾಗಿದ್ದ ಅವರು, ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು ಎಂದು ತಿಳಿದು ಬಂದಿದೆ.


ಬದಿಯಡ್ಕದ ನವಜೀವನ ಹೈಸ್ಕೂಲ್‌ನಲ್ಲಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಪಡೆದಿದ್ದರು. ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಡಿಸಿಎಚ್, ಪದವಿಗಳನ್ನು ಪಡೆದಿದ್ದರು.

ಪಟ್ಟಾಜೆ ಶ್ಯಾಮ್ ಭಟ್‌- ಶಂಕರಿ ಅಮ್ಮ ದಂಪತಿಗಳ ಪುತ್ರರಾಗಿ 1951ರ ಜುಲೈ 22ರಂದು ಜನಿಸಿದ್ದರು.


ಅವರು ಪತ್ನಿ ಉಮಾ, ಮಗ- ಸಾಫ್ಟ್‌ವೇರ್ ಎಂಜಿನಿಯರ್‌ ಶಮೇಶ, ಇಬ್ಬರು ಸೋದರರು ಸೇರಿದಂತೆ ಬಂಧು-ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.


ಅತ್ಯಂತ ಧಾರ್ಮಿಕ ಶ್ರದ್ಧೆಯುಳ್ಳವರಾಗಿದ್ದ ಅವರು, ಕೊಲ್ಲೂರು ಮೂಕಾಂಬಿಕೆ ಹಾಗೂ ಕಂಚಿ ಕಾಮಕೋಟಿ ಮಠಾಧೀಶರ ಭಕ್ತರಾಗಿದ್ದರು.


ಅವರ ನಿಧನಕ್ಕೆ ಐಎಂಎ ಕಾಸರಗೋಡು ಘಟಕ ಸಂತಾಪ ವ್ಯಕ್ತಪಡಿಸಿದೆ. 

Key Words: Kasaragod, Pediatrician, Death, ನಿಧನ, ಕಾಸರಗೋಡು, ಡಾ. ನರಸಿಂಹ ಭಟ್ ನಿಧನ,


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post