ಕಾಸರಗೋಡು: ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಕಾಮದುಘಾ ಯೋಜನೆಯನ್ವಯ ಕಾರ್ಯಾಚರಿಸುವ ಬಜಕೂಡ್ಲುವಿನ ಅಮೃತಧಾರಾ ಗೋಶಾಲೆ, ಗೋಲೋಕದ ಗೋವುಗಳ ಮೇವಿಗಾಗಿ ಹಸಿ ಹುಲ್ಲು ಸಂಗ್ರಹಿಸುವ ಶ್ರಮದಾನವು ಕಾಸರಗೋಡು ವಿದ್ಯಾನಗರ ಚಿನ್ಮಯಾ ಕಾಲನಿ ಸಮೀಪದ ಶಾಂತಾ ಶ್ರೀಧರ ಕಾಮತ ಮತ್ತು ಮಹಮ್ಮದ ತಳಂಗರೆ ಇವರ ಸ್ಥಳದಿಂದ ಹಸಿಹುಲ್ಲನ್ನು ಕತ್ತರಿಸಿ ಸಂಗ್ರಹಿಸಿ ಬಜಕೂಡ್ಲುವಿನ ಅಮೃತಧಾರಾ ಗೋಶಾಲೆಗೆ ಸಾಗಿಸುವ ಶ್ರಮದಾನ 'ಸೇವಾಅರ್ಘ್ಯ'ವು ಯಶಸ್ವಿಯಾಗಿ ಜರಗಿತು.
ಕೋವಿಡ್ ಮಾನದಂಡಕ್ಕೆ ಅನುಸಾರವಾಗಿ ನಿಯಮಪಾಲನೆಯೊಂದಿಗೆ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಯಿತು.
ಕಾಮದುಘಾ ಸಂಚಾಲಕರಾದ ಡಾ.ವೈ.ವಿ.ಕೃಷ್ಣಮೂರ್ತಿ ಇವರು ನೇತೃತ್ವ ವಹಿಸಿದರು. ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಬಿಂದುಸಿಂಧು ಪ್ರಧಾನ ಉಳುವಾನ ಈಶ್ವರ ಭಟ್ ಕಾಸರಗೋಡು, ಕಾಸರಗೋಡು ವಲಯ ಅಧ್ಯಕ್ಷರಾದ ಅರ್ಜುನಗುಳಿ ಶಂಕರನಾರಾಯಣ ಭಟ್ಟ, ವಲಯ ಕೋಶಾಧಿಕಾರಿ ರಮೇಶ ಭಟ್ಟ ವೈ.ವಿ, ಸಹಾಯ ಪ್ರಧಾನ ಮುರಳಿ ಮೊಗ್ರಾಲ್, ಯಸ್.ಯನ್.ಪ್ರಸಾದ, ಸವಿತಾ ಐ ಭಟ್, ಸವಿತಾ ಆರ್ ಭಟ್, ವಿದ್ಯಾರ್ಥಿ ಅನ್ವಿತ್ ಆರ್ ಭಟ್ ಇವರು ಭಾಗವಹಿಸಿದರು.
ಸುಜಿತ್ ಮನ್ನಿಪಾಡಿಯವರು ಹುಲ್ಲು ಕತ್ತರಿಸಲು ಸಹಿಕರಿಸಿದರು. ವೈ.ಕೆ.ಗೋವಿಂದ ಭಟ್, ರಮೇಶ ಭಟ್ ವೈ.ವಿ., ಎಸ್.ಎನ್.ಪ್ರಸಾದ, ವಲಯದ ಶಿಷ್ಯಮಾಧ್ಯಮ ಪ್ರಧಾನ ಈಶ್ವರ ಭಟ್ ಇವರು ಪ್ರಾಯೋಜಕತ್ವ ವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment