ಸುಳ್ಯ :ತಾಲೂಕಿನ ಐವರ್ನಾಡು ಗ್ರಾಮ ದ ರಾಷ್ಟ್ರಾಭಿಮಾನಿ ವೇದಿಕೆ ಐವರ್ನಾಡು ವತಿಯಿಂದ ಕಾರ್ಗಿಲ್ ದಿವಸ್ ಆಚರಣೆಯನ್ನು ಜು.26 ರಂದು ಐವರ್ನಾಡು ಗ್ರಾಮ ವಿಕಾಸ ಸಭಾಭವನ ದಲ್ಲಿ ಕಾರ್ಯಕ್ರಮ ನಡೆಯಿತು.
ಸುಳ್ಯ ನಗರಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ರವರು ಉಪನ್ಯಾಸ ನೀಡಿದರು.
ಹಾಗೆಯೇ ವೇದಿಕೆಯಲ್ಲಿ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ನವೀನ್ ಚಾತುಬಾಯಿ ಉಪಸ್ಥಿತರಿದ್ದರು.
ಕಿಶನ್ ಜಬಳೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು.
ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಎ.ಪಿ.ಎಂ.ಸಿ.ಉಪಾಧ್ಯಕ್ಷ ನವೀನ್ ಕುಮಾರ್ ಸಾರಕರೆ, ಭವಾನಿಶಂಕರ ಪೂಜಾರಿಮನೆ, ಗಣೇಶ್ ಕೊಚ್ಚಿ, ರಾಜೀವಿ ಪರ್ಲಿಕಜೆ, ರಾಜೀವಿ ಲಾವಂತಡ್ಕ, ಅನಂತಕುಮಾರ್ ಖಂಡಿಗೆಮೂಲೆ, ಚಿದಾನಂದ ಬಾಂಜಿಕೋಡಿ, ರಕ್ಷಿತ್ ಸಾರಕೂಟೇಲು, ಶಿವಕುಮಾರ್ ಬಾಂಜಿಕೋಡಿ, ಶರವಣ ಬಾಂಜಿಕೋಡಿ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
إرسال تعليق