ಬೆಳ್ತಂಗಡಿ; ಗಂಡನೊಬ್ಬ ತನ್ನ ಹೆಂಡತಿಯನ್ನು ತವರಿನಲ್ಲಿ ಬಿಟ್ಟು ನಾದಿನಿಯೊಂದಿಗೆ ಪರಾರಿಯಾದ ಘಟನೆಯೊಂದು ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಸಮೀಪದ ಕೈಕಂಬ ನಿವಾಸಿ ಮಹಮ್ಮದ್ ಎಂಬವರ ಪುತ್ರಿಯನ್ನು 9 ತಿಂಗಳ ಹಿಂದೆ ಮುಸ್ತಫಾ ಎಂಬವನಿಗೆ ವಿವಾಹ ಮಾಡಿಕೊಟ್ಟಿದ್ದರು.
ಇತ್ತೀಚೆಗೆ ದಂಪತಿಗಳ ನಡುವೆ ಮನಸ್ತಾಪ ಉಂಟಾಗಿದೆ ಎನ್ನಲಾಗಿದ್ದು, ಈ ನಡುವೆ ತನ್ನ ಪತ್ನಿಯ ತಂಗಿಯ ಜೊತೆ ಸಲುಗೆಯಿಂದಿದ್ದ ಮುಸ್ತಫಾ, ಗುರುವಾರದಂದು ತನ್ನ ಪತ್ನಿಯನ್ನು ಬಿಟ್ಟು ನಾದಿನಿಯ ಜೊತೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇದೀಗ ತನ್ನ ಕಿರಿಯ ಪುತ್ರಿ ಇದುವರೆಗೆ ಮನೆಗೆ ವಾಪಾಸ್ಸಾಗದೇ ಕಾಣೆಯಾಗಿದ್ದಾಳೆ ಎಂದು ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment