ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೃಹರಕ್ಷಕ ದಳ ಬಂಟ್ವಾಳದ ಪ್ರಭಾರ ಘಟಕಾಧಿಕಾರಿ ಐತಪ್ಪ ಅವರಿಗೆ ಪದೋನ್ನತಿ

ಗೃಹರಕ್ಷಕ ದಳ ಬಂಟ್ವಾಳದ ಪ್ರಭಾರ ಘಟಕಾಧಿಕಾರಿ ಐತಪ್ಪ ಅವರಿಗೆ ಪದೋನ್ನತಿ



ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಬಂಟ್ವಾಳ ಘಟಕದ ಪ್ರಭಾರ ಘಟಕಾಧಿಕಾರಿ (ಸಾರ್ಜೆಂಟ್) ಐತಪ್ಪ (ಮೆಟಲ್ ನಂ 354) ಅವರಿಗೆ ಪ್ಲಟೂನ್ ಕಮಾಂಡರ್ ಹುದ್ದೆಗೆ ಪದೋನ್ನತಿ ನೀಡಲಾಗಿದೆ.


ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರ ಶಿಫಾರಸ್ಸಿನ ಮೇರೆಗೆ ಕೇಂದ್ರ ಕಛೇರಿಯಿಂದ ದೊರೆತ ಪೂರ್ಣ ಪ್ರಮಾಣದ ಘಟಕಾಧಿಕಾರಿ (ಫ್ಲಟೂನ್ ಕಮಾಂಡರ್) ಹುದ್ದೆಯ ಪದೋನ್ನತಿ ಪ್ರಮಾಣ ಪತ್ರವನ್ನು ಘಟಕಾಧಿಕಾರಿಗಳ ಸಭೆಯಲ್ಲಿ ಶುಕ್ರವಾರ (ಜು.23) ಹಸ್ತಾಂತರಿಸಲಾಯಿತು.


ಇವರು ಪ್ರಭಾರ ಘಟಕಾಧಿಕಾರಿಯಾಗಿದ್ದು, ಗೃಹರಕ್ಷಕದಳದಲ್ಲಿ 10-4-1992 ರಂದು ಸೇವೆಗೆ ಸೇರಿದ್ದು, ಸುಮಾರು 29 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಕಛೇರಿಯಿಂದ ಲೀಡರ್‌ಶಿಪ್ ತರಬೇತಿ ಹಾಗೂ ಮಂಗಳೂರಿನಲ್ಲಿ ನಡೆದ ಪ್ರಥಮ ಚಿಕಿತ್ಸೆ ತರಬೇತಿ, ಮೂಲ ಅಗ್ನಿ ಶಮನ ತರಬೇತಿ, ಪ್ರವಾಹ ರಕ್ಷಣಾ ತರಬೇತಿಗಳನ್ನು ಪಡೆದಿರುತ್ತಾರೆ.


ಇವರು ಅಗ್ನಿಶಾಮಕ ಕರ್ತವ್ಯ, ಪ್ರವಾಹ ರಕ್ಷಣಾ ಕರ್ತವ್ಯ, ಪೊಲೀಸ್ ಠಾಣಾ ಕರ್ತವ್ಯ, ಚುನಾವಣಾ ಕರ್ತವ್ಯ, ಬಂದೋಬಸ್ತ್ ಕರ್ತವ್ಯಗಳಲ್ಲಿ ಪೂರ್ಣಪ್ರಮಾಣ ತೊಡಗಿಸಿಕೊಂಡಿರುತ್ತಾರೆ. ಇವರ ಸೇವಾ ಹಿರಿತನ ಮತ್ತು ದಕ್ಷತೆಯನ್ನು ಆಧರಿಸಿ ಇವರಿಗೆ ಪದೋನ್ನತಿ ನೀಡಲು ಮಾನ್ಯ ಡಿಜಿಪಿ ಅವರು ಶಿಫಾರಸ್ಸು ಸಲ್ಲಿಸಿರುತ್ತಾರೆ. ಇದೀಗ ಮಾನ್ಯ ಡಿಜಿಪಿ ಅವರ ಆದೇಶ ಮತ್ತು ಅನುಮತಿಯೊಂದಿಗೆ ಐತಪ್ಪ ಅವರಿಗೆ ಪೂರ್ಣ ಪ್ರಮಾಣದ ಪದೋನ್ನತಿ ನೀಡಲಾಗಿದೆ.


ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಉಪ ಸಮಾದೇಷ್ಟರಾದ ರಮೇಶ್, ಕಛೇರಿ ಅಧೀಕ್ಷಕರಾದ ರತ್ನಾಕರ್, ಪ್ರಥಮ ದರ್ಜಿ ಸಹಾಯಕಿ ಅನಿತಾ ಹಾಗೂ 15 ಘಟಕಗಳ ಘಟಕಾಧಿಕಾರಿಗಳು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post