ರಷ್ಯಾ: ಟ್ರಾಫಿಕ್ ಪೊಲೀಸ್ ಒಬ್ಬರು ತನ್ನ ಐಷಾರಾಮಿ ಬಂಗಲೆಯಲ್ಲಿ ಚಿನ್ನದ ಶೌಚಾಲಯ ಹೊಂದಿದ್ದನ್ನು ಗಮನಿಸಿದ ಅಧಿಕಾರಿಗಳು ಅಚ್ಚರಿ ಮೂಡಿಸಿದ, ಇಂತಹದೊಂದು ಘಟನೆ ರಷ್ಯಾದಲ್ಲಿ ನಡೆದಿದೆ.
ರಷ್ಯಾದ ಸಂಚಾರ ಪೊಲೀಸ್ ಮುಖ್ಯಸ್ಥ ಕರ್ನಲ್ ಅಲೆಕ್ಸಿ ಸಪೊನೊವ್ ವಿರುದ್ಧ ಭ್ರಷ್ಟಚಾರದ ಆರೋಪ ಕೇಳಿ ಬಂದಿತ್ತು.
ಕೂಡಲೇ ಪೊಲೀಸ್ ತನಿಖಾ ತಂಡವೊಂದು ಇವರ ಮನೆಗೆ ದಾಳಿ ನಡೆಸಿ, ಈ ವೇಳೆ ಭವ್ಯ ಬಂಗಲೆಯಲ್ಲಿ, ಬಂಗಾರದ ಶೌಚಾಲಯ ಇರುವುದು ತಿಳಿದು ಬಂದಿದೆ.
ಈ ಐಷಾರಾಮಿ ಬಂಗಲೆಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನದ ಶೌಚಾಲಯ, ದುಬಾರಿ ಅಲಂಕಾರಿಕ ವಸ್ತುಗಳು ಪತ್ತೆಯಾಗಿವೆ.
ಮನೆಯ ನೆಲಹಾಸನ್ನು ಅಮೃತಶಿಲೆಗಳಿಂದ ವಿನ್ಯಾಸಮಾಡಲಾಗಿದ್ದು, ತನಿಖಾ ಅಧಿಕಾರಿಗಳು ಮನೆಯಲ್ಲಿರುವ ಕೆಲವು ಬೆಲೆ ಬಾಳುವ ವಸ್ತು, ಕೆಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತನಿಖಾ ತಂಡವು , ಈ ಪ್ರಕರಣ ಬಗ್ಗೆ ಕರ್ನಲ್ ಅಲೆಕ್ಸಿ ಸಪೊನೊವ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.
Post a Comment