ಈ ಭೂಮಿ ಸಕಲ ಕಲಾ-ಸಂಪತ್ತುಗಳ ಆಗರ. ಸಣ್ಣ ಮಕ್ಕಳಿಂದ ತೊಡಗಿ ಹಿರಿಯರ ತನಕ ಅನೇಕ ಪ್ರತಿಭಾವಂತರ ನೆಲೆ ಈ ಪವಿತ್ರ ಭೂಮಿ. ಅದಕ್ಕೇ ನಾವು ಹೇಳುವುದು ಈ ಭೂಮಿ ಸಕಲ ಕಲೆಗಳ ಮಾತೆ ಎಂದು.
ಮಂಡಲ ಕಲೆ ಕೇರಳ ರಾಜ್ಯದ ಪವಿತ್ರ ಕಲೆ.ಈ ಕಲೆಯಲ್ಲಿ ನಮ್ಮ ಚಿಗುರು ಪ್ರತಿಭೆಗಳು ಹಿಂದೆ ಉಳಿದಿಲ್ಲ.
ನಾಡಿನ ಹೆಸರಾಂತ ಯಕ್ಷ ಪ್ರತಿಭೆ ಇಂದೂ ಯಕ್ಷ ಬಾನಂಗಳದಲ್ಲಿ ನೆನಪಿನ ಮಾಣಿಕ್ಯವಾಗಿ ಬೆಳಗುತ್ತಿರುವ ಅನೇಕ ಪ್ರಶಸ್ತಿ ಪುರಸ್ಕಾರಗಳ ಕಲಾ ಸರದಾರ ಕಲಾವಿದರ ಒಡಲ ನೆನಪಲ್ಲಿ ಹಸಿರಾಗಿರುವ ಡಾ.ಶ್ರೀಧರ ಭಂಡಾರಿಯವರ ಮೊಮ್ಮಗಳು ಶಿಕ್ಷಣ ಕಲಾ ಪ್ರವೀಣೆ ಕು.ಭೂಮಿಶ್ರೀ, ಈಗಾಗಲೇ ಎಸೆಸೆಲ್ಸಿ ಹತ್ತನೇ ತರಗತಿಯ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಎಳೆಯ ಕಲಾಬಾಲೆ. ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೆಂಕಿಲ ಪುತ್ತೂರಿನ ವಿದ್ಯಾರ್ಥಿನಿ.
ವಿಘ್ನ ನಿವಾರಕ ಮಹಾಗಣಪತಿ ವಿದ್ಯಾಗಣಪತಿಯೂ ಹೌದು. ಕು.ಭೂಮಿಶ್ರೀ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಂಭ್ರಮದಲ್ಲಿ ವಿದ್ಯಾಗಣಪತಿಯ ಸುಂದರ ಕಲೆಯನ್ನು ತನ್ನ ಕುಂಚದಿಂದ ಮೂಡಿಸಿ ಮನ ಹರುಷಗೊಳಿಸಿದ್ದಾಳೆ.
ತನ್ನ ಬಿಡುವಿನ ಸಮಯದಲ್ಲಿ ಕಲಾರಚನೆಯಲ್ಲಿ ಮಗ್ನವಾಗುವ ಕು.ಭೂಮಿಶ್ರೀ ತನ್ನ ತಾತ ಮೇರು ಕಲಾವಿದ ಕಲಾ ರತ್ನ ಕೀರ್ತಿ ಶೇಷ ಪುತ್ತೂರು ಶ್ರೀಧರ ಭಂಡಾರಿಯವರ ನೆನಪಿಸಿ ಭಾವುಕಳಾಗುವಳು.
ತನ್ನ ಆರನೆಯ ವಯಸ್ಸಿನಲ್ಲಿ ಶ್ರೀಕೃಷ್ಣನ ಪಾತ್ರ ಮಾಡಿದ ತಾತನ ಬಳಿ ಅವರು ಕೊನೆಯದಾಗಿ ಶ್ರೀಕೃಷ್ಣನ ಪಾತ್ರಮಾಡಿ ಕುಳಿತು ಕೊಂಡಿರುವ ಸಂದರ್ಭದಲ್ಲಿ ಅವರ ಬಳಿ ನಿಂತು ಫೊಟೋ ತೆಗೆಸಿಕೊಂಡ ಭೂಮಿಶ್ರೀಯ ಕಣ್ಣಾಲಿಗಳು ಇಂದೂ ಆ ಫೊಟೋ ನೋಡಿ ತುಂಬಿ ಬರುವುದ ತಿಳಿದಾಗ ತಾತ ಮೊಮ್ಮಗುವಿನ ಬಾಂಧವ್ಯ ಹೇಗಿರಬಹುದು ಎಂಬುದನ್ನು ನಾವು ಊಹಿಸ ಬಹುದಾಗಿದೆ.
ಶ್ರೀಮತಿ ಕೋಕಿಲಾ ಜಯವರ್ಧನ್ ಮತ್ತು ಶ್ರೀ ಜಯವರ್ಧನ್ ಅವರ ಮುದ್ದಿನ ಮಗಳಾದ ಬೇಬಿ ಭೂಮಿಶ್ರೀ ಅವಳ ಕಲಾಪ್ರತಿಭೆಗೆ ಇರಲಿ ನಮ್ಮದೊಂದು ಪ್ರೀತಿಯ ಚಪ್ಪಾಳೆ.
✍️ ನಾರಾಯಣ ರೈ ಕುಕ್ಕುವಳ್ಳಿ.
Congrats 👏🏻👏🏻👏🏻
ReplyDeleteCongratulations
DeletePost a Comment