ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೆಎಸ್.ಇ.ಟಿ ಪರೀಕ್ಷೆ ಜುಲೈ 25ಕ್ಕೆ ನಡೆಸಲು ತೀರ್ಮಾನ

ಕೆಎಸ್.ಇ.ಟಿ ಪರೀಕ್ಷೆ ಜುಲೈ 25ಕ್ಕೆ ನಡೆಸಲು ತೀರ್ಮಾನ

 


ಬೆಂಗಳೂರು : ಮೈಸೂರು ವಿಶ್ವವಿದ್ಯಾಲಯವು ಮುಂದೂಡಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ) ಪರೀಕ್ಷೆಯನ್ನು ಜುಲೈ 25 ರಂದು ನಡೆಸಲು ತೀರ್ಮಾನಿಸಲಾಗಿದೆ.


ಈ ಬಗ್ಗೆ ಆದೇಶ ಹೊರಡಿಸಿರುವ ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ದಿನಾಂಕ 11 ನೇ ಏಪ್ರಿಲ್ 2021 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿತ್ತು. 


ಆದ್ದರಿಂದ ಇದೀಗ ಕೆ-ಸೆಟ್ 2021 ಪರೀಕ್ಷೆಯನ್ನು 25-07-2021 ರ ಭಾನುವಾರ ನಡೆಸಲು ತೀರ್ಮಾನಿಸಲಾಗಿದೆ.



ಎಲ್ಲಾ ನೋಂದಾಯಿತ ಅಭ್ಯರ್ಥಿಗಳು ಕೆ-ಸೆಟ್ 2021 ರ ಪರೀಕ್ಷೆಗೆ ಸಂಬಂಧಿಸಿದಂತೆ ಕೆಸೆಟ್ ವೆಬ್ ಸೈಟ್ http://kset.uni.mysore.ac.in/ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು





0 Comments

Post a Comment

Post a Comment (0)

Previous Post Next Post