ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಪಮುಖ್ಯಮಂತ್ರಿ ಪುತ್ರನ ಕಾರು ಅಪಘಾತ; ಬೈಕ್ ನಲ್ಲಿದ್ದ ರೈತ ಸಾವು

ಉಪಮುಖ್ಯಮಂತ್ರಿ ಪುತ್ರನ ಕಾರು ಅಪಘಾತ; ಬೈಕ್ ನಲ್ಲಿದ್ದ ರೈತ ಸಾವು

 


ಬಾಗಲಕೋಟೆ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರನ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ರೈತ ಮೃತಪಟ್ಟ ಘಟನೆಯೊಂದು ಕೂಡಲ ಸಂಗಮ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿಯ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನಲ್ಲಿ ಅಪಘಾತ ಸಂಭವಿಸಿದೆ.  


ಲಕ್ಷ್ಮಣ ಸವದಿ ಹಿರಿಯ ಮಗ ಚಿದಾನಂದ ಸವದಿ ಸೇರಿದಂತೆ 12 ಜನರು ಎರಡು ಕಾರಿನಲ್ಲಿ ಪ್ರವಾಸಕ್ಕೆ ಪ್ರಯಾಣ ನಡೆಸಿದ್ದರು.


ಈ ಬಗ್ಗೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ ಎನ್ನಲಾಗಿದೆ.


ಅಪಘಾತ ನಡೆದ ಬಳಿಕ ತಮ್ಮ ವಾಹನದ ನಂಬರ್ ಜಖಂಗೊಳಿಸಿ ಲಕ್ಷ್ಮಣ ಸವದಿ ಪುತ್ರ ಮತ್ತೊಂದು ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ.  


ಈ ವೇಳೆಯಲ್ಲಿ ಸ್ಥಳೀಯರು ಅವರನ್ನು ಹಿಡಿದು ಕೂರಿಸಿದ್ದು, ನಂತರ ಪೊಲೀಸರು ಬಂದಿದ್ದಾರೆ.


ಡಿಸಿಎಂ ಪುತ್ರನ ಬದಲು ಕಾರ್ ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post