ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಳ್ಳಿಯಲ್ಲೊಂದು ಸುಂದರವಾದ ಕೆಮನಬಳ್ಳಿ ಜಲಪಾತ

ಹಳ್ಳಿಯಲ್ಲೊಂದು ಸುಂದರವಾದ ಕೆಮನಬಳ್ಳಿ ಜಲಪಾತ

 





ನೀರೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ನೀರಲ್ಲಿ ಆಟ, ಮೋಜು, ಮಸ್ತಿ ನೀರು ಕಂಡರೆ ಇಷ್ಟ ಪಡದವರೆ ಇಲ್ಲಾ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ನೀರು ಕಂಡರೆ ಅಬ್ಬಾ ಎನ್ನುವವರೇ ಹೆಚ್ಚು. 

ಈಗಾಗಲೇ ಎಲ್ಲೆಡೆ ಭಾರೀ ಮಳೆ ನದಿ, ಬಾವಿ, ಹಳ್ಳ, ಕೆರೆ, ಜಲಪಾತ ಗಳು ತುಂಬಿ ಹರಿಯುತ್ತವೆ. ಜೋಗ್ ಜಲಪಾತ ನೋಡಲು ಎಲ್ಲರಿಗೂ ಸಾಧ್ಯವಿಲ್ಲ. 



ಅದೇ ರೀತಿ ಊರಲ್ಲಿ ಇರುವ ಜಲಪಾತ ವನ್ನು ಕಾಣುವುದು ನೋಡುಗರಿಗೆ ಒಂದು ಖುಷಿಯೇ ಬೇರೆ. ಇದೊಂದು ಜಲಪಾತ ಸುಳ್ಯ ತಾಲೂಕಿನ ಜಾಲ್ಸೂರು ಬೆಳ್ಳಾರೆ ಕಳೆದು ಐವರ್ನಾಡು ನಿಡುಬೆಯ ಒಳದಾರಿ ಪ್ರವೇಶಿಸಿದಾಗ ಹಳ್ಳಿಯಲ್ಲೊಂದು ಹಚ್ಚ ಹಸುರಿನ ಮರ ಗಿಡಗಳ ನಡುವೆ ಒಂದು ಸುಂದರ ಕೆಮನಬಳ್ಳಿ ಜಲಪಾತ.

 ಇಲ್ಲಿಯ ಸುಂದರ ಕ್ಷಣಗಳನ್ನು ಸವಿಯಲು ಅನೇಕ ಭಾಗಗಳಿಂದ ಜನಸಾಗರ ಹರಿದು ಬರುವುದು. 

ಸಂಜೆ ವೇಳೆಗೆ ತಂಪಾದ ಹಿಮದಿಂದ ಕೂಡಿದ ಮಂಜಿನ ಹನಿಗಳ ಹಾಗೆ ಎಲ್ಲರನ್ನೂ ಕೈ ಬೀಸಿ ಕರೆಯುವ ಆ ಜಲಪಾತ, ಬೊಗರೆಯುವ ಸದ್ದು ಮನಸ್ಸಿಗೆ ಮುದ ನೀಡುತ್ತದೆ. ಅಲ್ಲಿಯೇ ಇದ್ದು ಬಿಡುವ ಎನ್ನುವ ರೋಮಾಂಚಕ ದೃಶ್ಯ ಗಳು ಮನಸೂರೆಗೊಳ್ಳುವುದು. 

ಪೋಟೋ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ನೀವೂ ಬನ್ನಿ ಈ ಸುಂದರ ದೃಶ್ಯವನ್ನು ಸವಿಯಲು.

ಬರಹ: ಹರ್ಷಿತಾ ಹರೀಶ್ ಕುಲಾಲ್


0 تعليقات

إرسال تعليق

Post a Comment (0)

أحدث أقدم