ಬೆಂಗಳೂರು: 3 ವರ್ಷದ ಬಾಲಕ ಗಣೇಶ ವಿಗ್ರಹವನ್ನು ನುಂಗಿದ ಘಟನೆಯೊಂದು ನಡೆದಿದೆ, ಮಣಿಪಾಲ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ವಿಗ್ರಹವನ್ನು ಹೊರ ತೆಗೆಯುವಲ್ಲಿ ಯಶಸ್ವಿ ಯಾಗಿದ್ದಾರೆ.
ಗಣೇಶ ವಿಗ್ರಹ ದ ಜೊತೆಗೆ ಆಟ ಆಡುತ್ತಿದ್ದ ಬಾಲಕ ಅರಿವಿಲ್ಲದೆಯೇ ಅದನ್ನು ನುಂಗಿ, ಆಹಾರ ಸೇವಿಸಲು ಕಷ್ಟಪಡುತ್ತಿದ್ದ.
ಇದರಿಂದಾಗಿ ಆಸ್ಪತ್ರೆ ಗೆ ಕರೆದೊಯ್ದು ಸಮಯದಲ್ಲಿ ಎದೆ ಮತ್ತು ಕುತ್ತಿಗೆ ಭಾಗದ ಎಕ್ಸ್-ರೇ ನಡೆಸಿ, ವಿಗ್ರಹ ಇರುವ ಜಾಗವನ್ನು ಪತ್ತೆ ಹಚ್ಚಿದರು.
ಎಂಡೋಸ್ಕೊಪಿಕ್ ವಿಧಾನದ ಮೂಲಕ ವಿಗ್ರಹವನ್ನು ಹೊರತೆಗೆಯಲಾಯಿತು. ಮೂರು ಗಂಟೆಗಳ ಬಳಿಕ ಆಹಾರ ಸೇವಿಸಲು ಅವಕಾಶ ನೀಡಲಾಯಿತು.
ಬಾಲಕ ಇದೀಗ ಪೂರ್ಣ ಪ್ರಮಾಣದಲ್ಲಿ ಗುಣಮುಖಗೊಂಡಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಮಕ್ಕಳ ತಜ್ಞ ಡಾ. ಶ್ರೀಕಾಂತ್ ಕೆ.ಪಿ., 'ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮಗು ಅಸ್ವಸ್ಥಗೊಂಡಿದ್ದು, ಒಂದು ಗಂಟೆಯ ಅವಧಿಯಲ್ಲಿ ಗಣೇಶ ವಿಗ್ರಹವನ್ನು ಹೊರತೆಗೆಯಲಾಯಿತು.
ಇಲ್ಲವಾದಲ್ಲಿ ಅನ್ನ ನಾಳಕ್ಕೆ ತೊಂದರೆಯಾಗುವ ಸಾಧ್ಯತೆಯಿತ್ತು' ಎಂದು ತಿಳಿಸಿದರು.
Post a Comment