ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಾವು ಕಚ್ಚಿ 11 ವರ್ಷದ ಬಾಲಕ ಸಾವು

ಹಾವು ಕಚ್ಚಿ 11 ವರ್ಷದ ಬಾಲಕ ಸಾವು



 ಹೊಸಪೇಟೆ: ಹಾವು ಕಚ್ಚಿದ್ದರಿಂದ 11 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆಯೊಂದು ನಡೆದಿದೆ. ತಾಲ್ಲೂಕಿನ ಗಾಳೆಮ್ಮನ ಗುಡಿಯ ಕೃಷ್ಣ ಮೃತ ಬಾಲಕ.


ಭಾನುವಾರ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ, ಈ ವೇಳೆಯಲ್ಲಿ ಹಾವು ಕಚ್ಚಿದ್ದರಿಂದ ಜೋರಾಗಿ ಕಿರುಚಿದ್ದಾನೆ. ತಕ್ಷಣವೇ ಪೋಷಕರು ಆತನ ಬಳಿ ಓಡಿ ಬಂದಿದ್ದಾರೆ. ಹಾವು ಕಚ್ಚಿರುವುದನ್ನು ತಿಳಿದು ಮಗನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ.  


ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಕೊಪ್ಪಳದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.  ಅಲ್ಲಿ ಚಿಕಿತ್ಸೆ ಫಲಿಸದೆ ತಡರಾತ್ರಿ ಬಾಲಕ ಕೃಷ್ಣ ಮೃತಪಟ್ಟಿದ್ದಾನೆ' ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹಂಪಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 Comments

Post a Comment

Post a Comment (0)

Previous Post Next Post