ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಶ್ವ ಹಾಲು ದಿನ: ಕಳೆಂಜದ ಗೋಶಾಲೆಗೆ ಪಶು ಆಹಾರದ ಕೊಡುಗೆ

ವಿಶ್ವ ಹಾಲು ದಿನ: ಕಳೆಂಜದ ಗೋಶಾಲೆಗೆ ಪಶು ಆಹಾರದ ಕೊಡುಗೆ


ಬೆಳ್ತಂಗಡಿ: 
ವಿಶ್ವ ಹಾಲು ದಿನ ಹಾಗೂ ವಿಶ್ವ ಪರಿಸರ ದಿನಾಚರಣೆ ಹಿನ್ನಲೆಯಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಕಳೆಂಜದ ಶ್ರೀ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್‌ನ  ಗೋಶಾಲೆ ಗೆ ಭೇಟಿ ನೀಡಿ ಪಶು ಆಹಾರ ಕೊಡುಗೆ ನೀಡಿದರು.

ಜಾಗತಿಕ ಆಹಾರವಾಗಿ ಹಾಲಿನ ಮಹತ್ವವನ್ನು ಗುರುತಿಸುವ ಸಲುವಾಗಿ ಈ ದಿನಾಚರಣೆಯನ್ನು ಆರಂಭಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಕ್ಷೇತ್ರಗಳಾದ ಡೈರಿ ಶಿಕ್ಷಣ, ಪಶುವೈದ್ಯಕೀಯ ಔಷಧಗಳು, ಸಂಶೋಧನೆ ಮತ್ತು ಜಾನುವಾರು ಆಹಾರ ಪೂರೈಕೆಯೂ ಪ್ರಯೋಜನ ಪಡೆಯುತ್ತದೆ.

ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ವತಿಯಿಂದ, 25 ಬ್ಯಾಗ್ ಪಶು ಆಹಾರ, 4 ಲೋಡ್ ಹಸಿ ಹುಲ್ಲು, ಹಾಗೂ 15 ಸಾವಿರ ರೂ. ಆರ್ಥಿಕ ನೆರವು ನೀಡಿದ್ದು,  ರೋಟರಿ ನಂದಗೋಕುಲ ಗೋಗ್ರಾಸ ಯೋಜನೆಯನ್ನು ಬಿಡುಗಡೆ ಮಾಡಲಾಯಿತು. ಇದೇ ವೇಳೆ ಆ್ಯನ್ಸ್ ಕ್ಲಬ್ ನ ಸದಸ್ಯರು ಶಾಸ್ತ್ರೋಕ್ತವಾಗಿ ಗೋ ಪೂಜೆ ನೆರವೇರಿಸಿದರು. 

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು  ಜಿಲ್ಲೆಯ ರೋಟರಿ ಅಸಿಸ್ಟೆಂಟ್ ಗವರ್ನರ್ ಹಾಗೂ ವಿಧಾನ ಪರಿಷತ್ ಸದಸ್ಯ ರೊ ಪ್ರತಾಪಸಿಂಹ ನಾಯಕ್ ಅವರು  ವಹಿಸಿದ್ದರು.

ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ನ ಅಧ್ಯಕ್ಷ ರೊ.ಡಾ.ಎಂ.ಎಂ.ದಯಾಕರ್, ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಟ್ರಸ್ಟಿಗಳಾದ ರೊ. ರಮೇಶ್ ಪ್ರಭು,  ಭಾಸ್ಕರ ಧರ್ಮಸ್ಥಳ, ರೋಟರಿ ಕ್ಲಬ್ ನ ಕಾರ್ಯದರ್ಶಿ ರೊ.ಶ್ರೀಧರ ಕೆ.ವಿ. ನಿಯೋಜಿತ ಅಧ್ಯಕ್ಷ ರೊ.ಶರತ್ ಕೃಷ್ಣ ಪಡುವೆಟ್ನಾಯ, ನಿಯೋಜಿತ ಕಾರ್ಯದರ್ಶಿ ರೊ.ಅಬೂಬಕ್ಕರ್, ಇವರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ  ನವೀನ್ ನೆರಿಯ, ಗೋಶಾಲೆಯ ನಿರ್ವಾಹಣ ಸಂಚಾಲಕ  ಹರೀಶ್.ವಿ,  ರೊ.ಅರವಿಂದ ಕಾರಂತ, ರೊ.ಅನಂತ ಭಟ್ ಮಚ್ಚಿಮಲೆ, ರೊ.ಉದಯಶಂಕರ್, ರೊ.ಅಣ್ಣಿ ಪೂಜಾರಿ, ರೊ.ಅರುಣ್ ಕುಮಾರ್, ರೊ.ಪ್ರಕಾಶ ನಾರಾಯಣ್ , ರೊ.ಸಂದೇಶ್ ಕುಮಾರ್ ರೊ.ಗಾಯತ್ರಿ ದಿನೇಶ್, ರೊ.ಮನೋರಮ ಭಟ್, ಆ್ಯನ್ಸ್ ಕ್ಲಬ್ ಸದಸ್ಯೆಯರಾದ ರಾಜಶ್ರೀ ರಾವ್, ಗಾಯತ್ರಿ ಶ್ರೀಧರ್, ಸುಜಾತಾ ಅಣ್ಣಿ ಪೂಜಾರಿ, ಡಾ.ಅನಿತಾ ದಯಾಕರ್, ಹೇಮಲತಾ, ಅಖಿಲಾ ಪ್ರಕಾಶ್ ನಾರಾಯಣ್,  ಜ್ಯೋತಿ ಪಿ.ನಾಯಕ್,  ಉಷಾಕಿರಣ್ ಕಾರಂತ್  ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ ಧನಂಜಯ ರಾವ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ ಟ್ರಸ್ಟ್ ನ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು ವಂದಿಸಿದರು.

Tags: World Milk day, ವಿಶ್ವ ಹಾಲು ದಿನ

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post