ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಲಸಿಕೆ ಹಾಕಿಸಿಕೊಂಡವರಿಗೆ ಬಂಪರ್ ಆಫರ್ ನೀಡಿದ ಇಂಡಿಗೋ ವಿಮಾನ ಸಂಸ್ಥೆ

ಲಸಿಕೆ ಹಾಕಿಸಿಕೊಂಡವರಿಗೆ ಬಂಪರ್ ಆಫರ್ ನೀಡಿದ ಇಂಡಿಗೋ ವಿಮಾನ ಸಂಸ್ಥೆ

 

ನವದೆಹಲಿ: ಲಸಿಕೆಹಾಕಿಸಿಕೊಂಡಿರುವ ಪ್ರಯಾಣಿಕರಿಗೆ ಇಂಡಿಗೋ ವಿಮಾನದಲ್ಲಿ ರಿಯಾಯಿತಿಯನ್ನು ಘೋಷಿಸಿದ್ದು, ಇಂದಿನಿಂದ ಇಂಡಿಗೋ ವಿಮಾನ ಸಂಸ್ಥೆ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಶೇ.10 ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದೆ.

ಮೂಲ ಬೆಲೆಯ ಆಧಾರದಲ್ಲಿ ರಿಯಾಯಿತಿ ದೊರೆಯಲಿದ್ದು, ಲಿಮಿಟೆಡ್ ಇನ್ವೆಂಟರಿ ಲಭ್ಯವಿದೆ ಎಂದು ಏರ್ ಲೈನ್ಸ್‌ನ ಹೇಳಿಕೆ ನೀಡಿದೆ.

ಭಾರತದ 18 ವರ್ಷದ ಮೇಲ್ಪಟ್ಟ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಈ ಆಫರ್ ಅನ್ವಯವಾಗಲಿದ್ದು, ಭಾರತದಿಂದ ಬುಕ್ ಮಾಡುವವರು ಕನಿಷ್ಟ ಒಂದು ಡೋಸ್ ಲಸಿಕೆ ಪಡೆದಿರಬೇಕು ಎಂದು ಇಂಡಿಗೋ ಸಂಸ್ಥೆ ತಿಳಿಸಿದೆ.

ಬುಕ್ಕಿಂಗ್ ವೇಳೆ ಈ ಸೌಲಭ್ಯವನ್ನು ಪಡೆಯುವ ಪ್ರಯಾಣಿಕರು ಏರ್ ಪೋರ್ಟ್ ಚೆಕ್-ಇನ್ ವೇಳೆ ಕೋವಿಡ್-19 ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಆರೋಗ್ಯ ಸೇತು ಆಪ್ ನಲ್ಲಿ ತಮ್ಮ ಲಸಿಕೆ ಸ್ಥಿತಿ ಏನಿದೆ ಎಂಬುದನ್ನು ತೋರಿಸಬಹುದಾಗಿದೆ.

ಇಂಡಿಗೋದ ಮುಖ್ಯ ಕಾರ್ಯತಂತ್ರ ಹಾಗೂ ಆದಾಯ ವಿಭಾಗದ ಅಧಿಕಾರಿ ಸಂಜಯ್ ಕುಮಾರ್ ಈ ಬಗ್ಗೆ ಮಾತನಾಡಿ, 'ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿ ರಾಷ್ಟ್ರೀಯ ಲಸಿಕೆ ಅಭಿಯಾನಕ್ಕೆ ಕೊಡುಗೆ ನೀಡಬೇಕೆಂದೆನಿಸಿತು, ಇದಕ್ಕಾಗಿ ಲಸಿಕೆ ಪಡೆಯುವುದನ್ನು ಉತ್ತೇಜಿಸುವುದಕ್ಕಾಗಿ ಈ ರಿಯಾಯಿತಿ ಆಫರ್ ನ್ನು ಘೋಷಿಸಲಾಗಿದೆ' ಎಂದು ಹೇಳಿದ್ದಾರೆ.

0 تعليقات

إرسال تعليق

Post a Comment (0)

أحدث أقدم