ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಪ್ರವೇಶ ದ್ವಾರಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ: ಎಸಿ ಖಡಕ್ ಎಚ್ಚರಿಕೆ

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಪ್ರವೇಶ ದ್ವಾರಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ: ಎಸಿ ಖಡಕ್ ಎಚ್ಚರಿಕೆ

 

ಧರ್ಮಸ್ಥಳ:  ಹೊರ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪುತ್ತೂರು  ಸಹಾಯಕ ಕಮಿಷನರ್ ಕಂದಾಯ ಇಲಾಖೆ ಉಪವಿಭಾಗ  ಯತೀಶ್ ಉಳ್ಳಾಲ್ ಇವರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂ.20ರಂದು ತುರ್ತು ಸಭೆ ನಡೆಯಿತು.

ಹೊರಜಿಲ್ಲೆಗಳಿಂದ ಬರುವ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸುವಂತೆ ಸೂಚಿಸಿದ್ದು, ಜಿಲ್ಲೆಗೆ ಆಗಮಿಸುತ್ತಿರುವ ಯಾತ್ರಾರ್ಥಿಗಳನ್ನು ಹಿಂದಕ್ಕೆ ಕಳುಹಿಸುವಂತೆ ಅಧಿಸೂಚನೆ ನೀಡಿದ್ದಾರೆ.

ಈ ಹಿನ್ನಲೆಯಲ್ಲಿ ಗುಂಡ್ಯಾ ಚೆಕ್ ಪೋಸ್ಟ್, ಚಾರ್ಮಾಡಿ ಚೆಕ್ ಪೋಸ್ಟ್, ನಾರಾವಿ ಚಕ್ ಪೋಸ್ಟ್, ಉಪ್ಪಿನಂಗಡಿ ಚೆಕ್ ಪೋಸ್ಟ್, ಸಂಪಾಜೆ ಚಕ್ ಪೋಸ್ಟ್ ಗಳಲ್ಲಿ ಜಿಲ್ಲಾಡಳಿತದಿಂದ ಬ್ಯಾರಿಕೇಡ್ ಗಳನ್ನು ಹಾಕುವಂತೆ ಸೂಚಿಸಿದ್ದು, ಶ್ರೀ ಕ್ಷೇತ್ರದ  ಪ್ರಮುಖ ಪ್ರವೇಶ ದ್ವಾರಗಳಲ್ಲಿ ದೇವಸ್ಥಾನ ಮತ್ತು ಅನ್ನಛತ್ರ, ವಸತಿಗೃಹಗಳು ಲಾಕ್ ಡೌನ್ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಿದೆ ಎಂಬ ಬ್ಯಾನರ್ ಗಳನ್ನು ಹಾಕುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚಿಸಲಾಗಿದೆ.




ಈ ಸಂದರ್ಭದಲ್ಲಿ ಬೆಳ್ತಂಗಡಿ  ತಹಸೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ  ಮಹೇಶ್ , ಮಾನ್ಯ ಪೊಲೀಸ್ ಉಪನಿರೀಕ್ಷಕರು ಪೊಲೀಸ್ ಠಾಣೆ ಧರ್ಮಸ್ಥಳ ಚಂದ್ರಶೇಖರ್ , ಪೊಲೀಸ್ ಉಪನಿರೀಕ್ಷಕರು ಸಂಚಾರಿ ಪೊಲೀಸ್ ಠಾಣೆ ಬೆಳ್ತಂಗಡಿ  ಓಡಿಯಪ್ಪ ಗೌಡ , ಮಾನ್ಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ ಶಿವಪ್ರಸಾದ್ ಅಜಿಲರು, ಧರ್ಮಸ್ಥಳ ರಜತಾದ್ರಿ ಕೋವಿಡ್ ಕೇರ್ ಸೆಂಟರ್ ನೋಡಲ್ ಅಧಿಕಾರಿ ಡಾ. ಜಯಕೀರ್ತಿ ಜೈನ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಧರ್ಮಸ್ಥಳ ಉಮೇಶ್ ಕೆ , ಪ್ರದೀಪ್ ಗ್ರಾಮಕರಣಿಕರು ಧರ್ಮಸ್ಥಳ,  ಪಾರ್ಶ್ವನಾಥ ಜೈನ್ ಮ್ಯಾನೇಜರ್ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳ ಗ್ರಾಮ ಪಂಚಾಯತಿ ಸದಸ್ಯರಾದ  ರವಿಕುಮಾರ್,  ದಿನೇಶ್ ರಾವ್, ಹರ್ಷಿತ ಜೈನ್  ಸಭೆಯಲ್ಲಿ ಉಪಸ್ಥಿತರಿದ್ದರು

0 تعليقات

إرسال تعليق

Post a Comment (0)

أحدث أقدم