ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜನಾಗ್ರಹ: ಸುಳ್ಳು ಜಾಹೀರಾತುಗಳಿಗೆ ಕಡಿವಾಣ ಹಾಕಿ

ಜನಾಗ್ರಹ: ಸುಳ್ಳು ಜಾಹೀರಾತುಗಳಿಗೆ ಕಡಿವಾಣ ಹಾಕಿ

ಸಮಾಜಕ್ಕೆ ಕೆಟ್ಟ ಸಂದೇಶ ಕೊಡುವವರಷ್ಟೇ ಕಳ್ಳರಲ್ಲ, ಅಂಥವರನ್ನು ಸ್ಟಾರ್‌ಗಳೆಂದು ಪೂಜಿಸುವ ಜನರನ್ನು ಏನೆನ್ನಬೇಕು?



ಮೊನ್ನೆ ಟಿವಿ ನೋಡುತ್ತಿದ್ದೆ. ಕೆಲವು ಜಾಹಿರಾತುಗಳನ್ನು ನೋಡುವಾಗ ವಾಕರಿಕೆ ಬಂದಿತ್ತು. ಕೆಲವು ಸ್ಯಾಂಪಲ್ ಹೇಳುತ್ತೇನೆ ಕೇಳಿ.


ಆ ಕ್ರೀಮ್ ಬಳಸುವುದರಿಂದ 5 ವಾರದಲ್ಲಿ ಕಪ್ಪು ಮೈ ಬಣ್ಣ ಇರುವವರೆಲ್ಲ ಬೆಳ್ಳಗಾಗುತ್ತಾರಂತೆ. ಇದು ಯಾವ ಲ್ಯಾಬ್ ಅಲ್ಲಿ ಪ್ರೂವ್ ಆಗಿದೆ? ನಮ್ಮೂರಲ್ಲಿ ಅದನ್ನು ಬಳಸಿ ಬಿಳಿ ಆದ ಹುಡುಗಿಯರು ಇಲ್ಲ. ಆದರೆ ಇಂತಹ ಕ್ರೀಮ್‌ಗಳನ್ನೂ ಹಾಕಿ ಕ್ಯಾನ್ಸರ್‌ನಂತಹ ಭಯಾನಕ ಕಾಯಿಲೆ ಅಂಟಿಸಿಕೊಂಡವರ ಬಗ್ಗೆ ಮಾಹಿತಿ ಕಲೆಹಾಕಬಹುದು!


ಆ ಪಾನೀಯ ಅರೋಗ್ಯ ಪೂರ್ಣ ಪೇಯ ಅಂತೇ ಮಕ್ಕಳಿಗೆ ಬೇರೆ, ಗರ್ಭಿಣಿಯರಿಗೆ ಬೇರೆ, ವಯಸ್ಸಾದವರಿಗೆ ಬೇರೆ, ಹಾಲುಣಿಸುವ ತಾಯಂದಿರಿಗೆ ಬೇರೆಯಂತೆ. ಅದರಿಂದ ಕ್ಯಾಲ್ಸಿಯಂ ಪ್ರೋಟಿನ್ ದೇಹಕ್ಕೆ ಸರಿಯಾಗಿ ಸಿಗುವುದಂತೆ ಹೇಗೆಂದು ಬಿಳಿ ವಸ್ತ್ರ ಹಾಕಿದ ವ್ಯಕ್ತಿಯೊಬ್ಬ ಹೇಳುವುದು ಇದು ಅದೆಷ್ಟು ಸತ್ಯ? ವೈಜ್ಞಾನಿಕ ಸತ್ಯ ಎಷ್ಟು? ಇಂತಹ ಪಾನೀಯಗಳಲ್ಲಿ ಇರುವ flavouring agent, colouring agent malt, sugar ನಿಜಕ್ಕೂ ಅದೆಷ್ಟು ಆರೋಗ್ಯಕಾರಿ? ಕೇವಲ ಹಣಕ್ಕಾಗಿ ಅದು ಕುಡಿಯಿರಿ, ಇದು ಕುಡಿಯಿರಿ ಎನ್ನುವ ನಮ್ಮ ಸೆಲೆಬ್ರೆಟಿಗಳು, ಕ್ರಿಕೆಟ್ ಸ್ಟಾರ್‌ಗಳು ಅದೆಷ್ಟು ಜನ ತಮ್ಮ ಮಕ್ಕಳಿಗೆ ಅದನ್ನು ಕುಡಿಸಿದ್ದಾರೆ?


ಎಣ್ಣೆಗಳಲ್ಲಿ ಇರುವ ಪೆಟ್ರೋಲಿಯಂ ಪ್ರಾಡಕ್ಟ್ ಮಿಕ್ಸ್ (ರಿಫೈನ್ಡ್), ಇದು ಉತ್ತಮ ಅಡುಗೆ ತೈಲ ಎಂದು, ಹೃದಯ ರೋಗ ಕೊಲೆಸ್ಟರಾಲ್ ಬರುವುದಿಲ್ಲ ಎಂದು ಸುಳ್ಳು ಹೇಳಿಯೇ ಭಾರತವನ್ನು ಇಂದು ವಿಶ್ವದ ಅತೀ ಹೆಚ್ಚು ಪ್ರಮೇಹ, ಹೃದಯ ರೋಗಿ ಇರುವ ದೇಶವಾಗಿಸಿದ ಈ ಮಾನಗೆಟ್ಟ ಸಿನಿಮಾ, ಕ್ರೀಡಾ ಕ್ಷೇತ್ರದ ದಿಗ್ಗಜರು ಈ ದೇಶದಲ್ಲಿರಲು ಅದೆಷ್ಟು ಯೋಗ್ಯರು?


ಮೈದಾಯುಕ್ತ ತಿಂಡಿ, ವಿಷಯುಕ್ತ ಟೂತ್ ಪೇಸ್ಟ್, ಗ್ಯಾಸ್ಟ್ರಿಕ್ ಔಷಧಿ ಸೋಪು, ಶ್ಯಾಂಪೂ ಇತ್ಯಾದಿ ಹಾಗೆ ಅವುಗಳು ಶ್ರೇಷ್ಠ ಎಂದು ಹಣಕ್ಕಾಗಿ ಸೆರಗು ಹಾಸುವ ಸೆಲೆಬ್ರೆಟಿಗಳನ್ನೂ ಮೊದಲು ಜೈಲಿಗಟ್ಟಿ.


ಇಷ್ಟು ಸಾಲದೆಂಬಂತೆ ಇನ್ನೂ ಮುಂದುವರಿದು ಇಸ್ಪೀಟ್ ಆನ್ಲೈನ್‌ನಲ್ಲಿ ಆಡಿ, ಕ್ರಿಕೆಟ್ ಅಲ್ಲಿ ಜೂಜು ಕಟ್ಟಿ ಹಣ ಮಾಡಿ ಎಂದು ಹೇಳಲು ಅದೆಷ್ಟೋ ಕ್ರಿಕೆಟ್ ಸ್ಟಾರ್‌ಗಳು, ಸಿನಿಮಾ ಸ್ಟಾರ್‌ಗಳು ಹಣಕ್ಕಾಗಿ ಸಮಾಜಕ್ಕೆ ಕೊಡುವ ಕೆಟ್ಟ ಸಂದೇಶ ನೋಡಿದರೆ ಇಂತಹವರನ್ನು ನಾಯಕರು ಎನ್ನಲು ನಾಚಿಕೆ ಆಗುತ್ತಿದೆ.


ಇದು ನನ್ನ ದೇಶ ಎನ್ನುವುದಕ್ಕಿಂತಲೂ ಇಂತಹ ಲಜ್ಜೆಗೆಟ್ಟ ಜನರನ್ನು ತಮ್ಮ ಆರಾಧ್ಯ ದೈವ ಎಂಬಂತೆ ಬಿಂಬಿಸುತಿರುವ ಈ ಅಭಿಮಾನಿಗಳು ಮೊದಲು ಬದಲಾಗಬೇಕಿದೆ. ಇನ್ನು ನಮ್ಮ ಸರ್ಕಾರಗಳ ಧೋರಣೆಗಳ ಬಗ್ಗೆ ಹೇಳದೆ ಮುಗಿಸಿದರೆ ಖಂಡಿತ ಅಪೂರ್ಣ ಲೇಖನವಾಗಬಹುದು.


ಮೈದಾ, ರಿಫೈನ್ಡ್ ಆಯಿಲ್, ಕೃತಕ ಬಣ್ಣ, ರುಚಿ ವರ್ಧಕಗಳುಳ್ಳ ತಿಂಡಿ, ಮಕ್ಕಳ ಔಷಧಿ, ಕೃತಕ ಪಾನೀಯ, ಶಕ್ತಿವರ್ಧಕ ಪೇಯ, ಮುಂತಾದವುಗಳಲ್ಲಿ ಬಳಸುವ ರಾಸಾಯನಿಕಗಳಿಂದಲೇ ಹೃದ್ರೋಗ, ಪ್ರಮೇಹ, ಕ್ಯಾನ್ಸರ್‌ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ತಮಗೆ ಸಿಗುವ ಬಿಡಿಕಾಸಿಗಾಗಿ ಬಾಯಿಮುಚ್ಚಿ ಕೂತಿರುವುದು ನೋಡಿದರೆ ಏನೆನ್ನಬೇಕು? ಕೇವಲ ಕೋರೋನ ಸಮಯದಲ್ಲಿ ಮಾಸ್ಕ್ ಹಾಕದ ವೈದ್ಯರನ್ನು ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸುತ್ತಿದ್ದಾರೆ ಎಂದು ಅವರ ಲೈಸೆನ್ಸ್ ಕ್ಯಾನ್ಸಲ್ ಮಾಡಿಸುವ, ಹಾಗೆ ಇಲ್ಲದ ಕೋವಿಡ್ 3ನೇ ಆಲೆ ಬಗ್ಗೆ ಮಕ್ಕಳನ್ನು ಹೆದರಿಸುವ ಸರಕಾರಿ ಕೃಪಾಪೋಷಿತ ಯಕ್ಷಗಾನ ಮೇಳದ ಪಾತ್ರಧಾರಿಗಳ ನಡೆ ಸಮಾಜಕ್ಕೆ ಅದ್ಯಾವ ಸಂದೇಶ ಕೊಡುತ್ತಿದೆ ಸ್ವಾಮೀ? ಆದರೂ ಕಾನೂನು ವೈದ್ಯರ ಲೈಸನ್ಸ್ ಕ್ಯಾನ್ಸಲ್ ಮಾಡಿಸುವುದಕ್ಕಷ್ಟೇ ಸೀಮಿತವೇ? ಅದೂ ಅಲ್ಲದೆ ಈ ಸರಕಾರಗಳಿಗೆ ಈ ರೀತಿ ಸಮಾಜಕ್ಕೆ ಜನರಿಗೆ ಮುಗ್ಧ ಮಕ್ಕಳಿಗೆ ಸುಳ್ಳು ಹೇಳುವ ಜನರ ದಾರಿ ತಪ್ಪಿಸುವ ಇಂತಹ ಜಾಹೀರಾತುಗಳು ಕಾಣದಿರುವುದು ನೋಡಿದಾಗ ನಮ್ಮ ಸರಕಾರಗಳ ಅಸಲಿ ಪೌರುಷ ಏನು ಎಂಬುದು ಅರಿವಾಗದಿರದು.


ಯಾಕೆ ಹೀಗೆ ಮಾಡಬಾರದು?

ಇಂತಹ ಸುಳ್ಳು ಹೇಳುವ ಜಾಹೀರಾತುಗಳನ್ನೂ ನಿಯಂತ್ರಿಸಲು ಒಂದು ಸೆನ್ಸಾರ್ ಬೋರ್ಡ್ ಸ್ಥಾಪಿಸಬಾರದೇಕೆ?


ಸಮಾಜಕ್ಕೆ ಕೆಟ್ಟ ಸಂದೇಶ ಕೊಡುವ ಜಾಹಿರಾತುಗಳನ್ನು ನಿಷೇಧಿಸಿ. 


ಕಪ್ಪು, ಬಿಳಿ ಕೋಟು ಹಾಕಿ ಹಣಕ್ಕಾಗಿ ಸಮಾಜಕ್ಕೆ ಸುಳ್ಳು ಸಂದೇಶ ನೀಡುವ ಆಮೂಲಕ ಆಯಾ ವೃತ್ತಿಗಳಿಗೆ ಅಪಮಾನ ಮಾಡುವುದನ್ನು ನಿಷೇಧಿಸಿ.


ಇಂತಹ ಕ್ಯಾನ್ಸರ್ ಕಾರಕ ವಸ್ತುಗಳನ್ನು ಉಪಯೋಗಿಸಿ ದೇಶದ ಜನರ ಮುಗ್ಧ ಮಕ್ಕಳ ಜೀವದೊಡನೆ ಚೆಲ್ಲಾಟ ಆಡುತ್ತಿರುವ ವ್ಯಕ್ತಿ ಹಾಗೂ ಸಂಸ್ಥೆಗಳನ್ನೂ ದೇಶದಿಂದ ನಿರ್ಬಂಧಿಸಿ.


ಇದನ್ನು ಕಟ್ಟುನಿಟ್ಟಾಗಿ ಆಡಳಿತಾತ್ಮಕವಾಗಿ,ಅಥವಾ ಕಾನೂನಾತ್ಮಕವಾಗಿ ಮಾಡಿ. ಇಲ್ಲದಿದ್ದರೆ ಇಂತಹ ವ್ಯಕ್ತಿ ಹಾಗೂ ಸಂಸ್ಥೆಗಳನ್ನೂ ಹುಡುಕಿ ಸ್ವಯಂ ಪ್ರೇರಿತವಾಗಿ ಅವುಗಳ ವಿರೋಧವಾಗಿ ದೇಶದುದ್ದಕ್ಕೂ ಅಲ್ಲಲ್ಲಿ ಕಾನೂನು ಹೋರಾಟ ಆರಂಭವಾಗಲಿ.


ಇತ್ತೀಚಿಗೆ ರೊನಾಲ್ಡೊ ಎಂಬ ಫುಟಬಾಲ್ ತಾರೆಯೊಬ್ಬ ತನ್ನ ಪತ್ರಿಕಾಗೋಷ್ಠಿಯಲ್ಲಿ ಇಂತಹ ಪ್ರಖ್ಯಾತ ಕಂಪೆನಿಯ ಪಾನೀಯ ವೊಂದನ್ನು ರಿಜೆಕ್ಟ್ ಮಾಡಿ ನೀರನ್ನು ಆಯ್ದುಕೊಂಡು ಕೊಟ್ಟ ಸಂದೇಶ ನಿಜಕ್ಕೂ ಮೈ ರೋಮಾಂಚನಗೊಳಿಸುವಂತದ್ದು. ಇದರಿಂದ ಸಮಾಜಕ್ಕೆ ಆತ ಕೊಟ್ಟ ಸಂದೇಶ ನಮ್ಮ ದೇಶದ ನರಸತ್ತ ಸೆಲೆಬ್ರೆಟಿ ಗಳಿಗೆ ಪಾಠವಾಗ ಬಾರದೇಕೆ ?ಇಂತಹ ಒಬ್ಬನೇ ಒಬ್ಬ ರಿಯಲ್ ಹೀರೋ ನನ್ನ ದೇಶದಲ್ಲಿಲ್ಲದಿರುವುದು ನಮ್ಮ ವಿಪರ್ಯಾಸ ಅಲ್ಲವೇ?


ನೆನಪಿಡಿ: ಕೆಟ್ಟ ಸಂದೇಶ ಕೊಡುವವರಷ್ಟೇ ಕಳ್ಳರಲ್ಲ, ಈ ಸಂದೇಶ ಕೊಡಲು ಅವಕಾಶ ಮಾಡಿ ಕೊಡುವ ಜನರೂ ಕೂಡ ಕಳ್ಳರೇ.


-ಡಾ. ಶಶಿಕಿರಣ್ ಶೆಟ್ಟಿ

ಹೋಂ ಡಾಕ್ಟರ್ ಫೌಂಡೇಶನ್, ಉಡುಪಿ 

9945130630

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


0 Comments

Post a Comment

Post a Comment (0)

Previous Post Next Post