ಬೆಂಗಳೂರು: 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ' ಸಿನಿಮಾ ನಂತರ ರಿಷಬ್ ಶೆಟ್ಟಿ ಅವರು ನಟನೆಯಲ್ಲಿ ಬ್ಯುಸಿಯಾಗಿ ಬಿಟ್ಟರು. ಇದೀಗ ಮತ್ತೆ ನಿರ್ದೇಶಕ ರಿಷಬ್ ಶೆಟ್ಟಿ.
ಪ್ರತಿಭಾವಂತ ನಟ, ನಿರ್ಮಾಪಕ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತೆ ಡೈರೆಕ್ಷನ್ ಗೆ ಮುಂದಾಗಿದ್ದಾರೆ. ಇದಕ್ಕಾಗಿ ಕತೆಯನ್ನೂ ಸಿದ್ದಮಾಡಿಕೊಂಡಿದ್ದಾರೆ.
ಬೆಲ್ ಬಾಟಂ ಸಿನಿಮಾ ಬಳಿಕ ರಿಷಬ್ ನಟನಾಗಿ, ನಿರ್ಮಾಪಕನಾಗಿಯೇ ಗುರುತಿಸಿಕೊಂಡಿದ್ದರು. ಇದರ ನಡುವೆ ಲಾಕ್ ಡೌನ್, ಕೋವಿಡ್ ನಿಂದಾಗಿ ಅವರು ನಿರ್ದೇಶನ ಮಾಡಬೇಕಿದ್ದ ಸಿನಿಮಾ ರುದ್ರಪ್ರಯಾಗ ಅರ್ಧದಲ್ಲೇ ನಿಂತು ಹೋಯಿತು.
ಈಗ ಹೊಸ ಕತೆ ರೆಡಿ ಮಾಡಿಕೊಂಡಿದ್ದು, ಮತ್ತೆ ನಿರ್ದೇಶನಕ್ಕೆ ಮರಳುವುದಾಗಿ ಹೇಳಿದ್ದಾರೆ.
ಮಂಗಳೂರು ರೀತಿಯಲ್ಲಿ ಮೂಡಿಬರಲಿರುವ ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷದ ಕತೆಯನ್ನಿಟ್ಟುಕೊಂಡು ಅವರು ಸಿನಿಮಾ ಮಾಡಲಿದ್ದಾರಂತೆ.
Post a Comment