ನವದೆಹಲಿ : ಲಡಾಖ್ ನ ಲೇಹ್ ನಲ್ಲಿ ಬೆಳ್ಳಂಬೆಳಗ್ಗೆ ಭೂಕಂಪನ ಸಂಭವಿಸಿದ್ದು,ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್ ಸಿಎಸ್) ಮಾಹಿತಿ ನೀಡಿದೆ.
ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್ ಸಿಎಸ್) ಪ್ರಕಾರ, ಬೆಳಿಗ್ಗೆ 6:10 ಸಮಯದಲ್ಲಿ ಕಂಪನದ ಅನುಭವವಾಗಿದೆ.
ಲಡಾಖ್ ನ ಲೇಹ್ ನಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಆದರೆ ಯಾವುದೇ ಜೀವ ಹಾನಿ ಅಥವಾ ಆಸ್ತಿಗೆ ಹಾನಿಯಾದ ಬಗ್ಗೆ ವರದಿಗಳಿಲ್ಲ. ಹೆಚ್ಚಿನ ಮಾಹಿತಿ ಇನ್ನೂ ತಿಳಿಯಬೇಕಾಗಿದೆ.
Post a Comment