ನೆರಿಯ: ಕೋವಿಡ್ 2ನೇ ಅಲೆಯ ಅಬ್ಬರ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿದ್ದು, ತಾಲೂಕಿನಲ್ಲೆಡೆ ಕೋವಿಡ್ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳ ಜೊತೆ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ನೆರಿಯ ಗ್ರಾಮದ ಆಲಂಗಾಯಿ ಕಾಲನಿಯಲ್ಲಿ ಲಸಿಕೆ ವಿತರಣೆ ಕಾರ್ಯಕ್ರಮ ಜೂ.24ರಂದು ನಡೆದಿದ್ದು, ಈ ಪ್ರದೇಶದಲ್ಲಿರುವ ಮಲೆಕುಡಿಯ ಸಮುದಾಯವರಿಗೆ ಸರಕಾರದ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೋವಿಡ್ ಲಸಿಕೆಯನ್ನು ನೀಡಿದರು.
ಈ ವೇಳೆ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಕಾತಂಪ್ಪ ಮಲೆಕುಡಿಯ, ನೆರಿಯ ಗ್ರಾಮದ ವೈದ್ಯಾಧಿಕಾರಿ ವಾಣಿಶ್ರೀ, ಆರೋಗ್ಯ ಸಹಾಯಕಿ ಸರೋಜ, ಆಶಾಕಾರ್ಯಕರ್ತೆ ಸರೋಜಿನಿ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ನೀಡಲಾಯಿತು.
Post a Comment