ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೇರಳ ಅರಣ್ಯ ಇಲಾಖೆಯಿಂದಲೇ ಮರಗಳವು ಪ್ರಕರಣ: ಎಣ್ಮಕಜೆಯಲ್ಲಿ ಯುಡಿಎಫ್ ನಿಂದ ಗ್ರಾಮ ಕಚೇರಿ ಧರಣಿ

ಕೇರಳ ಅರಣ್ಯ ಇಲಾಖೆಯಿಂದಲೇ ಮರಗಳವು ಪ್ರಕರಣ: ಎಣ್ಮಕಜೆಯಲ್ಲಿ ಯುಡಿಎಫ್ ನಿಂದ ಗ್ರಾಮ ಕಚೇರಿ ಧರಣಿ

 


ಪೆರ್ಲ: ಅರಣ್ಯ ಇಲಾಖೆಯ ಮರ ಕಳ್ಳತನ ಮೂಲಕ ಅವ್ಯವಹಾರಕ್ಕೆ ಒತ್ತಾಸೆ ನೀಡಿರುವುದರ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿ ಯುಡಿಎಫ್ ಎಣ್ಮಕಜೆ ಪಂಚಾಯತ್ ಸಮಿತಿ ವತಿಯಿಂದ ಪೆರ್ಲ ಗ್ರಾಮ ಕಚೇರಿ ಮುಂಭಾಗ ಧರಣಿ ನಡೆಯಿತು.


ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಧರಣಿಯನ್ನು ಉದ್ಘಾಟಿಸಿ ಮಾತನಾಡುತ್ತಾ, ವನ ಕೊಳ್ಳೆಯ ಜತೆ ಕೈ ಜೋಡಿಸಿದವರು ಯಾರೆಂಬುದನ್ನು ಅರಿಯಲು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.


ಯುಡಿಎಫ್ ಎಣ್ಮಕಜೆ ಪಂ.ಸಮಿತಿ ಅಧ್ಯಕ್ಷ ರವೀಂದ್ರನಾಥ್ ನಾಯಕ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಸರಕಾರದ ಕೋವಿಡ್ ಮಾನದಂಡ ಪ್ರಕಾರ ನಡೆದ ಪ್ರತಿಭಟನಾ ಧರಣಿಯಲ್ಲಿ ಯುಡಿಎಫ್ ಕನ್ವೀನರ್ ಅಬುಬಕ್ಕರ್ ಪೆರ್ದನೆ, ಯುಡಿಎಫ್ ನೇತಾರರಾದ ಬಿ.ಅಬ್ದುಲ್ ರಹಿಮಾನ್, ವಿಲ್ಫ್ರೆಡ್ ಡಿಸೋಜ, ಸಿದ್ದೀಕ್ ವಳಮುಗೇರ್, ರಜಾಕ್ ನಲ್ಕ, ಪಂ.ಉಪಾಧ್ಯಕ್ಷೆ ಡಾ.ಝಹನಾಸ್ ಹಂಸಾರ್, ಆಯಿಷಾ ಎ.ಎ, ರಮ್ಲ ಇಬ್ರಾಹಿಂ, ಶೇರಿನಾ ಮುಸ್ತಾಫ, ಶ್ರೀನಿವಾಸ ಶೆಣೈ ಬಜಕೂಡ್ಲು  ಮೊದಲಾದವರು ಭಾಗವಹಿಸಿದ್ದರು.



0 Comments

Post a Comment

Post a Comment (0)

Previous Post Next Post