ಬೆಳ್ತಂಗಡಿ: ಕುಕ್ಕೇಡಿ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಶೇ.5 ವಿಕಲಚೇತನರಿಗೆ ಮೀಸಲಿರಿಸಿದ ಅನುದಾನದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 53 ವಿಶೇಷ ಚೇತನ ಫಲಾನುಭವಿಗಳಿಗೆ ಜೂ.25ರಂದು ಅಧ್ಯಕ್ಷ ಜನಾರ್ಧನ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಸ್ಟೀಮರ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಗೀತಾ ರಾಜೇಶ್, ಸದಸ್ಯರಾದ ಗೋಪಾಲ ಶೆಟ್ಟಿ, ದಿನೇಶ್ ಮೂಲ್ಯ, ಅನಿತಾ ಅನಿಲ್ ರಾಜ್, ತೇಜಾಕ್ಷಿ, ಗುಣವತಿ ಡಿ, ಪ್ರವೀತ, ರಜನಿ , ಧನಂಜಯ್, ಕುಸುಮ , ಪಿಡಿಒ ನವೀನ್ ಎ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು.
إرسال تعليق