ಮಂಗಳೂರು: ನಗರದ ವಿಶ್ವವಿದ್ಯಾಲಯ ಕಾಲೇಜಿನ ಎನ್‌ಸಿಸಿ ಭೂದಳ ಮತ್ತು ನೌಕಾದಳ ಘಟಕಗಳು ಜಂಟಿಯಾಗಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ 'ಆರೋಗ್ಯಕ್ಕಾಗಿ ಯೋಗ' ಎಂಬ ವಿಷಯದ ಕುರಿತು ಸೋಮವಾರ ವರ್ಚುವಲ್ ಕಾರ್ಯಕ್ರಮ ಹಮ್ಮಿಕೊಂಡಿದ್ದವು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯಾ ರೈ ಮಾತನಾಡಿ, ಯೋಗದ ಮಹತ್ವದ ಅರಿವು ಎಲ್ಲರಲ್ಲೂ ಮೂಡಬೇಕು. ಕೊವಿಡ್-19 ರ ಸಮಯದಲ್ಲಿ ದೈಹಿಕ-ಮಾನಸಿಕ ಆರೋಗ್ಯ ರಕ್ಷಣೆಗೆ ಯೋಗ ಉಪಕಾರಿ, ಎಂದರು.
ಎನ್‌ಸಿಸಿ ನೌಕಾದಳದ ಮುಖ್ಯಸ್ಥ ಲೆಫ್ಟಿನೆಂಟ್ ಡಾ.ಯತೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಭೂದಳದ ಮೇಜರ್ ಡಾ. ಜಯರಾಜ್ ಎನ್ ಅತಿಥಿಗಳನ್ನು ಸ್ವಾಗತಿಸಿದರು. ಕೆಡೆಟ್ ಯಶಸ್ವಿ ಶುಭಕೋರಿದರೆ, ಕೆಡೆಟ್ ಗೀತಾಂಜಲಿ ಪ್ರಾರ್ಥನೆ ನೆರವೇರಿಸಿದರು. ಕೆಡೆಟ್‌ಗಳು ಯೋಗದ ಕೆಲವು ಆಸನಗಳನ್ನು ಪ್ರದರ್ಶಿಸಿದರು ಯೋಗದ ಮಹತ್ವ ಸಾರುವ ಕ್ವಿಜ್ ಸ್ಪರ್ಧೆ ಗಮನ ಸೆಳೆಯಿತು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment