ಮಂಗಳೂರು: ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ’ಸೌರಮಾನ ಯುಗಾದಿ’ ಅಥವಾ ’ವಿಷು’ ಹಬ್ಬದ ಅಂಗವಾಗಿ ಆಯೋಜಿಸಿದ್ದ ’ವಿಷು ವಿಶೇಷ ಸ್ಪರ್ಧೆ - 2021’ರ ಫಲಿತಾಂಶ ಪ್ರಕಟಗೊಂಡಿದೆ.
ಪ್ರಬಂಧ, ಕಥೆ, ಕವಿತೆ ಮತ್ತು ನಗೆ ಬರಹ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಡಾ|ಹರಿಕೃಷ್ಣ ಭರಣ್ಯ, ಪ್ರವೀಣ ಪದ್ಯಾಣ ಮತ್ತಿತರರು ತೀರ್ಪುಗಾರರಾಗಿ ಭಾಗವಹಿಸಿದ್ದರು.
ಫಲಿತಾಂಶದ ವಿವರ:
1. ಪ್ರಬಂಧ:
ಪ್ರಥಮ: ಪರಮೇಶ್ವರಿ ಭಟ್, ಚಿಕ್ಕಬೊಮ್ಮಸಂದ್ರ, ಬೆಂಗಳೂರು
ದ್ವಿತೀಯ: ಸಹನಾ ಕಾಂತಬೈಲು, ಸಂಪಾಜೆ
2. ಕಥೆ:
ಪ್ರಥಮ: ರಜನಿ ಭಟ್, ಕಾವೂರು, ಮಂಗಳೂರು
ದ್ವಿತೀಯ: ಭಾರತೀ ಪ್ರಸಾದ್ ಕೊಡ್ವಕೆರೆ, ಕುಂಬಳೆ
3. ಕವನ:
ಪ್ರಥಮ: ಪಾರ್ವತಿ ಶಾಸ್ತ್ರಿ, ಕರ್ಮಲ, ಪುತ್ತೂರು
ದ್ವಿತೀಯ: ಕೃಷ್ಣಾನಂದ ಭಟ್ ಕೂಜಳ್ಳಿ, ಕುಮಟಾ
4. ನಗೆ ಬರಹ:
ಪ್ರಥಮ: ಅಕ್ಷತಾ ರಾಜ್ ಪೆರ್ಲ, ಕಾಸರಗೋಡು
ದ್ವಿತೀಯ: ರಮ್ಯ ನೆಕ್ಕರೆಕಾಡು, ವಿಟ್ಲ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment