ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯೋಗ ದಿನ: ಮುಜುಂಗಾವು ವಿದ್ಯಾಪೀಠದ ಮಕ್ಕಳಿಂದ ಯೋಗಾಭ್ಯಾಸ

ಯೋಗ ದಿನ: ಮುಜುಂಗಾವು ವಿದ್ಯಾಪೀಠದ ಮಕ್ಕಳಿಂದ ಯೋಗಾಭ್ಯಾಸ


ಮುಜುಂಗಾವು: ಸರ್ವ ಕಾಲಕ್ಕೂ ಸರ್ವರೋಗಕ್ಕೂ ಫಲಕಾರಿಯಾಗಿದೆ ಅಷ್ಟಾಂಗ  ಯೋಗಾಸನ. ವಿಶ್ವಯೋಗ ದಿನವಾದ ಇಂದು ಇದರಲ್ಲಿ  ಮಕ್ಕಳು ಮಾಡಬಹುದಾದಂತಹ ಯೋಗಾಸನವನ್ನು ಕಳೆದವರ್ಷದಂತೆ ಈ ಬಾರಿಯೂ ಮುಜುಂಗಾವು ವಿದ್ಯಾಪೀಠದ ಮಕ್ಕಳಿಗೆ ಅಧ್ಯಾಪಕ, ಅಧ್ಯಾಪಿಕೆಯರು  online ಮೂಲಕ ಚಟುವಟಿಕೆ ನೀಡಿ, ಮಕ್ಕಳಿಂದ ಮಾಡಿಸಿ; ಸಂಭ್ರಮಿಸಿದರು.


ಪ್ರತಿ ಬಾರಿಯಂತೆ ಒಂದನೆ ತರಗತಿಯಿಂದ ಹತ್ತನೆ ತರಗತಿ ತನಕದ ಮಕ್ಕಳು ಯೋಗಾಭ್ಯಾಸದಲ್ಲಿ  ಪಾಲ್ಗೊಂಡಿದ್ದರು. ಮಕ್ಕಳಿಗೆ online ಮೂಲಕ ಯೋಗಾಭ್ಯಾಸ ಸಲಹೆ ಕೊಡುವಲ್ಲಿ ಆಡಳಿತಾಧಿಕಾರಿ ಶ್ರೀ ಶ್ಯಾಂಭಟ್ ದರ್ಭೆಮಾರ್ಗ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ ಸಹಿತ ಎಲ್ಲಾ ಅಧ್ಯಾಪಕ ವೃಂದ ಅವರವರ ತರಗತಿ ಮೂಲಕ ಜತೆಗೂಡಿದ್ದರು.

ವರದಿ: ವಿಜಯಾಸುಬ್ರಹ್ಮಣ್ಯ,

ಗ್ರಂಥಪಾಲಿಕೆ, ಮುಜುಂಗಾವು ವಿದ್ಯಾಪೀಠ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post