ನ್ಯೂಯಾರ್ಕ್ : ಒಲಿಂಪಿಕ್ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ಮತ್ತು ಅವರ ಹೆಂಡತಿ ಕಾಸಿ ಬೆನೆಟ್ ಅವರು ಭಾನುವಾರ ಅವಳಿ ಮಕ್ಕಳಿಗೆ ಜನ್ಮವಿತ್ತರು. ಅವರನ್ನು ಥಂಡರ್ ಬೋಲ್ಟ್ ಮತ್ತು ಸೇಂಟ್ ಲಿಯೋ ಬೋಲ್ಟ್ ಎಂದು ಗುರುತಿಸಲಾಗಿದೆ.
ಬೋಲ್ಟ್ ಅವರು ಸೋಶಿಯಲ್ ಮೀಡಿಯಾ ಫಾದರ್ಸ್ ಡೇ ಫ್ಯಾಮಿಲಿ ಫೋಟೋ ದ ಜೊತೆಗೆ ವಿಚಾರವನ್ನು ತಿಳಿಸಿದ್ದಾರೆ.
ಅವಳಿ ಮಕ್ಕಳ ಜನನದ ನಂತರ ಅವರ ಪ್ರತಿಯೊಂದು ಮಕ್ಕಳ ಹೆಸರಿನ ಪಕ್ಕದಲ್ಲಿ ಮಿಂಚಿನ ಎಮೋಜಿಯನ್ನು ಹಾಕಿದ್ದಾರೆ. 2019 ರಲ್ಲಿ ಹುಟ್ಟಿದ ಮಗುವಿಗೆ ಒಲಿಂಪಿಯ ಲೈಟ್ನಿಂಗ್ ಎಂದು ಹೆಸರಿಟ್ಟಿದ್ದರು.
ಅವರ ಹೆಂಡತಿ ಕಾಸಿ ಬೆನ್ನೆಟ್ ಕೂಡ ಈ ವಿಚಾರದ ಬಗ್ಗೆ ಪೋಸ್ಟ್ ಮಾಡಿದ್ದಾರೆ 'ನನ್ನ ಶಾಶ್ವತ ಪ್ರೀತಿಗೆ ತಂದೆಯ ದಿನಾಚರಣೆಯ ಶುಭಾಶಯಗಳು ಉಸೈನ್ಬೋಲ್ಟ್ ನೀವು ಈ ಕುಟುಂಬದ ಬಂಡೆ ಮತ್ತು ನಮ್ಮ ಪುಟ್ಟ ಮಕ್ಕಳಿಗೆ ದೊಡ್ಡ ಅಪ್ಪ. ನಾವು ನಿಮ್ಮನ್ನು ಕೊನೆಯಿಲ್ಲದೆ ಪ್ರೀತಿಸುತ್ತೇವೆ! ' ಎಂದು ಬರೆದುಕೊಂಡಿದ್ದಾರೆ
Post a Comment