ಕಾರ್ಕಳ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕವು ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆನ್ಲೈನ್ ಮೂಲಕ ಆಚರಿಸಿತು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್ ಉದ್ಘಾಟಿಸಿದರು. ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 'ದೈನಂದಿನದ ಯೋಗಾಭ್ಯಾಸವು ನಮ್ಮ ದೇಹದ ಆರೋಗ್ಯ ವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವುದು ಮಾತ್ರವಲ್ಲದೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.
ನಿಟ್ಟೆ ವಿದ್ಯಾಸಂಸ್ಥೆಯ ಹೆಲ್ತ್‍ಸೆಂಟರ್‍ನ ವೈದ್ಯಾಧಿಕಾರಿ ಡಾ.ಶ್ವೇತಾ ಹೆಬ್ಬಾಳೆ ವಿದ್ಯಾರ್ಥಿಗಳಿಗೆ ‘ಇಂಪಾರ್ಟೆನ್ಸ್ ಆಫ್ ಯೋಗಾ ಡ್ಯೂರಿಂಗ್ ಕೋವಿಡ್ ಪ್ಯಾಂಡಮಿಕ್' ಎಂಬ ವಿಷಯದ ಬಗೆಗೆ ದಿಕ್ಸೂಚೀ ಭಾಷಣವನ್ನು ಮಾಡಿದರು. ಇದೇ ಸಂದರ್ಭದಲ್ಲಿ ಎನ್.ಎಸ್.ಎಸ್ ನ ಸಹಾಯಕ ಅಧಿಕಾರಿ ಡಾ.ಚೇತನ್ ಅವರು ವಿದ್ಯಾರ್ಥಿಗಳಿಗೆ ಪ್ರಾಣಾಯಾಮ ತಂತ್ರಗಳನ್ನು ವಿವರಿಸಿದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ವರ್ಗ, ಎನ್.ಎಸ್.ಎಸ್. ನಿಟ್ಟೆ ವಿಭಾಗದ ಮುಖ್ಯಸ್ಥ ಡಾ.ಜನಾರ್ದನ ನಾಯಕ್, ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಆನ್ಲೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
إرسال تعليق