ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಿಲಿಚಂಡಿಕಲ್ಲು: ಕೋವಿಡ್ ಪರೀಕ್ಷೆಗೆ ಒಳಗಾಗಲು ಹಿಂಜರಿದ ಗ್ರಾಮಸ್ಥರು

ಪಿಲಿಚಂಡಿಕಲ್ಲು: ಕೋವಿಡ್ ಪರೀಕ್ಷೆಗೆ ಒಳಗಾಗಲು ಹಿಂಜರಿದ ಗ್ರಾಮಸ್ಥರು



ಕುವೆಟ್ಟು: ವೈದ್ಯರ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಗ್ರಾಮ ಪಂಚಾಯತ್‌ನ ಕೋವಿಡ್ ಪ್ರಕರಣಗಳು ದಾಖಲಾಗಿರುವ ಪಿಲಿಚಂಡಿಕಲ್ಲು ಪ್ರದೇಶಕ್ಕೆ ವೈದ್ಯರು ಭೇಟಿ ನೀಡಿದ್ದು,  ಕೋವಿಡ್ ಪರೀಕ್ಷೆಗೆ ಒಳಗಾಗಲು ಇಲ್ಲಿನ ಜನ ಹಿಂದೇಟು ಹಾಕಿದ್ದಾರೆ.

ಈ ಹಿನ್ನಲೆ ಪ್ರದೇಶಕ್ಕೆ ತಹಶೀಲ್ದಾರ ಮಹೇಶ್ ಜೆ ಅವರು ಭೇಟಿ ನೀಡಿದ್ದು, ಪರೀಕ್ಷೆ ಮಾಡಿಸಿಕೊಳ್ಳುವಂತೆ ಗ್ರಾಮಸ್ಥರ ಮನವೊಲಿಸಿದ್ದಾರೆ.

ಬೆಳ್ತಂಗಡಿ ಪೋಲಿಸ್ ಠಾಣೆಯ ಠಾಣಾಧಿಕಾರಿ ನಂದಕುಮಾರ್ ಹಾಗೂ ಠಾಣೆಯ ಸಿಬ್ಬಂದಿ ವರ್ಗ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಡಿಪಿ, ಗ್ರಾಮಕರಣಿಕರಾದ ನಾರಾಯಣ್ ಕುಲಾಲ್, ಪಂಚಾಯತ್ ನ ಅಧ್ಯಕ್ಷೆ ಆಶಾಲತಾ, ಪಂಚಾಯತ್ ಸದಸ್ಯ ಸಮೀಮುಲ್ಲಾ, ಫಾದರ್ ಮುಲ್ಲರ್ ಹಾಸ್ಪಿಟಲ್ ಮಂಗಳೂರು ಇಲ್ಲಿಯ ವೈದ್ಯಾಧಿಕಾರಿ ತಂಡ, ಕುವೆಟ್ಟು ಗ್ರಾಮದ ಆರೋಗ್ಯ ಸಹಾಯಕಿ ಪ್ರೀತಿ, ಆಶಾ ಕಾರ್ಯಕರ್ತೆಯರು, ಸ್ಥಳೀಯ ಖಲಂದರ್, ಪಂಚಾಯತ್ ಸಿಬ್ಬಂದಿ ಉಪಸ್ಥಿತಿಯಲ್ಲಿ ಕೋವಿಡ್ ಟೆಸ್ಟ್ ನಡೆಸಲಾಯಿತು.


(ಉಪಯುಕ್ತ ನ್ಯೂಸ್)

0 Comments

Post a Comment

Post a Comment (0)

Previous Post Next Post