ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಿಕ್ಷಾ ಚಾಲಕರಿಗಾಗಿ ಉಚಿತ ಲಸಿಕೆ ಶಿಬಿರ: ಶಾಸಕರಿಂದ ಪರಿಶೀಲನೆ

ರಿಕ್ಷಾ ಚಾಲಕರಿಗಾಗಿ ಉಚಿತ ಲಸಿಕೆ ಶಿಬಿರ: ಶಾಸಕರಿಂದ ಪರಿಶೀಲನೆ


ಮಂಗಳೂರು: ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಓ), ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಯುವ ರೆಡ್‌ ಕ್ರಾಸ್‌ ವತಿಯಿಂದ ರಿಕ್ಷಾ ಚಾಲಕರಿಗಾಗಿ ಕೊವಿಡ್‌- 19 ಉಚಿತ ಲಸಿಕೆ ಶಿಬಿರ ಶನಿವಾರ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು.  


ಶಿಬಿರದಲ್ಲಿ ಸುಮಾರು 500 ಮಂದಿ ರಿಕ್ಷಾ ಚಾಲಕರಿಗೆ ಲಸಿಕೆ ನೀಡಲಾಯಿತು. ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಗಳೂರು ಆರ್‌ಟಿಓ ಆರ್‌ ಎಂ ವರ್ಣೇಕರ್‌, ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ಕ್ರಾಸ್‌ ನೋಡಲ್‌ ಅಧಿಕಾರಿ ಡಾ. ಗಣಪತಿ ಗೌಡ, ವಿವಿ ಕಾಲೇಜು ಮತ್ತು ಆರ್‌ಟಿಓ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು. ಮೊದಲ ಹಂತದ ಶಿಬಿರವನ್ನು ಜೂನ್‌ 19  ರಂದು ನಡೆಸಲಾಗಿತ್ತು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ  

0 تعليقات

إرسال تعليق

Post a Comment (0)

أحدث أقدم