ಮಂಗಳೂರು: ದಿವ್ಯಾಂಗರ/ ವಿಶೇಷಚೇತನರ ಕೋವಿಡ್ ಸಂಕಷ್ಟಗಳನ್ನು ನಿವಾರಿಸಲು ಸಕ್ಷಮ ಸಂಸ್ಥೆಯ ಸಹಾಯವಾಣಿಯನ್ನು ಆರಂಭಿಸಿದೆ. ಅಗತ್ಯವುಳ್ಳವರು ಈ ದೂರವಾಣಿ ಸಂಖ್ಯೆಯನ್ನು- 01206904999- ಸಂಪರ್ಕಿಸಬಹುದು ಎಂದು ಸಕ್ಷಮ ಕರ್ನಾಟಕದ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಹರಿಕೃಷ್ಣ ರೈ ಅವರ ಪ್ರಕಟಣೆ ಕೋರಿದೆ.
ಸಕ್ಷಮ ಸ್ಕ್ಯಾನ್ (ಸಕ್ಷಮ ಕೋವಿಡ್ ಆಕ್ಷನ್ ನೆಟ್ವರ್ಕ್) ದಿವ್ಯಾಂಗ ಸೇವಾವಾಣಿಯಲ್ಲಿ ಪ್ರಸ್ತುತ ಈ ಕೆಳಗಿನ ಸೇವೆಗಳು ಲಭ್ಯವಿವೆ.
1. ಕೋವಿಡ್ 19 ಲಸಿಕಾ ಅಭಿಯಾನ
2. ಲಸಿಕೆ ನೋಂದಣಿಗೆ ಕೋವಿನ್ ಪೋರ್ಟಲ್ ನಲ್ಲಿ ನೋಂದಾಯಿಸಲು ಆನ್ಲೈನ್ ಸಹಾಯ
3. ಲಸಿಕಾ ಕೇಂದ್ರಕ್ಕೆ ಹೋಗಲು ದಿವ್ಯಾಂಗರಿಗೆ ವ್ಯವಸ್ಥೆ, ಹತ್ತಿರದ ಲಸಿಕ ಕೇಂದ್ರಗಳ ಮಾಹಿತಿ
4. ಲಸಿಕೆಯ ಕುರಿತು ವೈದ್ಯರೊಂದಿಗೆ ಆನ್ಲೈನ್ ಸಮಾಲೋಚನೆ
5. ಕೋವಿಡ್ ರೋಗ ಹಾಗೂ ಚಿಕಿತ್ಸೆ ಬಗ್ಗೆ ವೈದ್ಯರೊಂದಿಗೆ ಆನ್ಲೈನ್ ಸಮಾಲೋಚನೆ
6. ಅವಶ್ಯಕತೆ ಇದ್ದಲ್ಲಿ ಮೆಡಿಕಲ್ ಕಿಟ್ ಹಾಗೂ ಇತರ ವೈದ್ಯಕೀಯ ಸಹಾಯಗಳು ಲಭ್ಯವಿವೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق