ಉಪ್ಪಿನಂಗಡಿ: ಉಪ್ಪಿನಂಗಡಿ ಗೃಹರಕ್ಷಕದಳದ ಘಟಕದಿಂದ ರವಿವಾರ ಇಲ್ಲಿನ ಮಾದರಿ ಶಾಲೆಯ ಅಂಗನವಾಡಿ ಕಟ್ಟಡದ ಬಳಿ ಸಸಿ ನೆಡುವ ಮೂಲಕ ಸರಳವಾಗಿ ವನಮಹೋತ್ಸವ ಆಚರಿಸಲಾಯಿತು.
ಈ ವೇಳೆ ಮಾತಾನಾಡಿದ ಕಮಾಂಡೆಂಟ್, ಒಬ್ಬೊಬ್ಬರೂ ವರ್ಷಕ್ಕೆ ಒಂದು ಗಿಡ ನೆಟ್ಟರೂ ಆದು ಬಹುದೊಡ್ಡ ಕೊಡುಗೆ ಆಗಲಿದ್ದು ಈ ಮೂಲಕ ಪರಿಸರ ರಕ್ಷಣೆಗೆ ಒತ್ತು ಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮಲ್ಲಿ ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರು, ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ, ಎ.ಎಸ್.ಎಲ್.ಜನಾರ್ಧನ ಆಚಾರ್ಯ, ಪ್ರವಾಹ ರಕ್ಷಣಾ ಕರ್ತವ್ಯ ದ ಸಮದ್, ಸೋಮನಾಥ್, ಠಾಣಾ ಕರ್ತವ್ಯದ ಸಿಬ್ಬಂದಿ, ಮಂಗಳೂರು ಘಟಕದ ಪ್ರವಾಹ ರಕ್ಷಣಾ ಗೃಹರಕ್ಷಕರು ಉಪಸ್ಥಿತರಿದ್ದರು.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment