ಯೋಗದಿಂದ ದುಗುಡ ದೂರ
ವಾಗಿ ಮನಸು ಬಹಳ ಹಗುರ
ಭೋಗದಲ್ಲಿ ಮಿತಿಯಮೀರದಿರಲು ಭಾಗ್ಯವು
ಬೇಗವೊದಗಿ ಬಂದು ನಮಗೆ
ರೋಗ ದೂರವಾಗಿ ಸುಖವು
ಸಾಗಿ ಬಂದು ಬದುಕು ಚೆಲುವು ತಿಳಿಯಿರೆಲ್ಲರು
ಮನಸು ದೇಹವೊಂದನೊಂದು
ದಿನವು ಬೆಸೆದುಕೊಂಡುಯಿರಲು
ದಣಿವು ಬಾರದಂತೆ ಯೋಗ ನಿತ್ಯ ಮಾಡಿರಿ
ಕನಸಿನಲ್ಲು ಕಂಡು ಬರದು
ಯಿನಿತು ಕೋಪ ತಾಪ ಬಿಗುವು
ಯಿನಿದು ಭಾವ ಮನದಿ ಮೂಡಿ ಹಗುರವಾಗಿರಿ
ನಾವು ವಿಶ್ವಕಿತ್ತ ಕೊಡುಗೆ
ನೋವನಳಿಸಿ ನಲಿವ ನೀಡಿ
ಭಾವ ತುಂಬಿ ಹರುಷ ಕೊಡುವ ಯೋಗ ಶಾಸ್ತ್ರವು
ಕಾವು ಚಿಂತೆಯೇರದಂತೆ
ಸಾವು ಬೇಗ ಬಾರದಂತೆ
ನೀವು ನಾವು ಯೋಗನಿರತರಾಗೆ ತೋಷವು.
-ಗುಣಾಜೆ ರಾಮಚಂದ್ರ ಭಟ್
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment