ಮೈಸೂರು: ನಗರದ ವಿಶ್ವ ಮಾನವ ಜೋಡಿ ರಸ್ತೆಯಲ್ಲಿ ಹೊಸದಾಗಿ ಆರಂಭವಾದ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರು ವಲಯ ವ್ಯವಸ್ಥಾಪಕ ಸುಧಾಕರ್ ಡಿ.ನಾಯಕ್ ಎ. ಅವರು ಉದ್ಘಾಟಿಸಿದರು.
ನಗರದ ಸರಸ್ವತಿ ಪುರಂನಲ್ಲಿನ ಬೇಕ್ ಪಾಯಿಂಟ್ ಬಳಿ ಇರುವ ವಿಶ್ವಮಾನವ ಜೋಡಿ ರಸ್ತೆಗೆ ಹೊಂದಿಕೊಂಡಿದ್ದ ಕಟ್ಟಡದಲ್ಲಿ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ನೂತನ ಪ್ರಾದೇಶಿಕ ಕಚೇರಿ ಆರಂಭಿಸಲಾಗಿದೆ.
ವಲಯ ವ್ಯವಸ್ಥಾಪಕ ಸುಧಾಕರ್ ಡಿ. ನಾಯಕ್ ಎ. ಅವರು ಕಟ್ಟಡ ಉದ್ಘಾಟಿಸಿ, ಮೈಸೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥ ಆರ್.ಮುರಳಿ ಕೃಷ್ಣ ಅವರಿಗೆ ಶುಭ ನುಡಿದರು.
ಈ ಮೊದಲು ನಗರದ ನಜರ್‌ಬಾದ್‌ನಲ್ಲಿದ್ದ ಬ್ಯಾಂಕ್ ಆಫ್ ಬರೋಡ ಪ್ರಾದೇಶಿಕ ಕಚೇಯನ್ನು ಇನ್ನಷ್ಟೂ ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಸರಸ್ವತಿಪುರಂ ಬೇಕ್ ಪಾಯಿಂಟ್ ಗೆ ಸ್ಥಳಾಂತರಗೊಂಡು ಉದ್ಘಾಟನೆಗೊಂಡಿದೆ ಎಂದು ಪ್ರಾದೇಶಿಕ ಕಚೇರಿ ಮುಖ್ಯಸ್ಥ ಆರ್.ಮುರಳಿ ಕೃಷ್ಣ ಹೇಳಿದರು
إرسال تعليق