ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ಮಾಸ್ಕ್ ನೊಳಗಿನ ನಗು-ಅಳು

ಕವನ: ಮಾಸ್ಕ್ ನೊಳಗಿನ ನಗು-ಅಳು

 


ನಗ ಬೇಕು...ಹೌದು......

ನಗುವುದಾದರೂ ಹೇಗೆ?

ಮೂಗು-ಬಾಯಿ ಮುಚ್ಚಿದೆ

ಮಾಸ್ಕ್....

ಬೊಬ್ಬಿಡುತ್ತಿವೆ.........

ರೇಡಿಯೋ ಟಿವಿ- ಮೊಬೈಲುಗಳು.......

ಕೋವಿಡ್...... ವೈರಸ್-ಕಂಟಕ...!

ಅಗಲಿದವರೆಷ್ಟೋ...

ಕಳಕೊಂಡವರ...

ಕಣ್ಣೀರ ಧಾರೆ....

ಹೌದು ಇಲ್ಲಿ ಎಲ್ಲರ ಆಟ

ಹಾಗೇನೇ...

ಬದುಕು ಒಂದು ಒಗಟು

ನಮಗೆ ಇದ್ದಾರೆ...

ಎಲ್ಲರೂ ಸುತ್ತ-ಮುತ್ತ.......

ಇದ್ದಾಗ ಊರೆಲ್ಲ ನೆಂಟರು

ಬಿದ್ದಾಗ ಅವರೆಲ್ಲ...

ದೂರ ಸರಿವರು...

ನಾವು ಬದುಕ ಬೇಕು

ಆತ್ಮವಿಶ್ವಾಸದಿಂದ-

ನಾಳೆಯ ಬೆಳಕಿನ...

ಭರವಸೆಯಿಂದ...

ಉಸಿರು ಕೊಟ್ಟ ದೇವ

ಆತನೇ ಕಾಪಾಡುವವ-

ಯಾಕೆ ಭಯ???

ನಗಬೇಕು ಸಂತಸದಿಂದ...

ಮಾಸ್ಕ್ ನೊಳಗಿನ ನಗೂ

ಸಂತಸ ತರ ಬಹುದು..

ಜನನ-ಜೀವನ-ಮರಣ..

ಹೌದು ಮೂರು ದಿನದ

ಬದುಕಿದು-

ಅರ್ಥವಾಗದ ಒಂದು-

ಒಗಟಿದು.....!!!

-ನಾರಾಯಣ ರೈ ಕುಕ್ಕುವಳ್ಳಿ


0 Comments

Post a Comment

Post a Comment (0)

Previous Post Next Post