ಮಂಗಳೂರು: ಹೋಟೆಲ್ ಅಸೋಸಿಯೇಷನ್ ನ ವತಿಯಿಂದ ಕೋವಿಡ್ 19 ಲಸಿಕೆಯನ್ನು ಹೋಟೆಲ್ ಕಾರ್ಮಿಕರಿಗೆ ಉಚಿತವಾಗಿ ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ. ಭರತ್ ಶೆಟ್ಟಿ, ಈ ಮೊದಲು ಜನರು ಕೆಲವು ಊಹಾಪೋಹಗಳಿಂದ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದು ಈಗ ಸಾಕಷ್ಟು ಪ್ರಮಾಣದಲ್ಲಿ ಎಚ್ಚೆತ್ತುಕೊಂಡಿರುತ್ತಾರೆ. ಜನರು ಲಸಿಕೆಯ ಬಗ್ಗೆ ಯಾವುದೇ ಭಯ ಪಡಬಾರದು. ಲಸಿಕೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲ ಎಂದು ತಿಳಿಸಿದರು. ಲಸಿಕೆ ಪಡೆದರೆ ನಮಗೆ ಮುಂದಿನ ದಿನಗಳಲ್ಲಿ ಕೊರೋನಾ ನಿಯಂತ್ರಣ ಮಾಡಲು ಸಾಧ್ಯ ಎಂದರು.
ಮುಂದಿನ ದಿನಗಳಲ್ಲಿ ಸರಕಾರವು ಜನರಿಗೆ ಯಾವ ಗೊಂದಲವೂ ಆಗದಂತೆ ಪಾರದರ್ಶಕತೆಯಿಂದ ವ್ಯಾಕ್ಸಿನ್ ಪೂರೈಕೆ ಮಾಡಲಿದೆ ಎಂದರು.
ಸೋಂಕಿತರು ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇರುವುದರಿಂದ ಮನೆಯಲ್ಲಿರುವ ಇತರರಿಗೂ ಸೋಂಕು ಹರಡಿಸುವುದರ ಜೊತೆಗೆ ನೆರೆಹೊರೆಯವರಿಗೂ ರೋಗ ಹರಡುವ ಸಾಧ್ಯತೆ ಇರುತ್ತದೆ ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ನಾವು ಸರಕ್ಷಿತವಾಗುವುದರೊಂದಿಗೆ ಸಮಾಜವನ್ನು ಸುರಕ್ಷಿತವಾಗಿಡಬೇಕು. ಆದ್ದರಿಂದ ಪ್ರತಿಯೊಬ್ಬ ನಾಗರೀಕರು ವ್ಯಾಕ್ಸಿನ್ ತೆಗೆದು ಕೊಳ್ಳುವುದು ಅತೀ ಅವಶ್ಯಕ ಎಂದರು.
ಇನ್ನು ಈ ಉಚಿತ ಲಸಿಕಾ ಶಿಬಿರ ಆಯೋಜಿಸಿದ ಜಿಲ್ಲಾಡಳಿತಕ್ಕೆ, ಸಹಕಾರ ನೀಡಿದ ಶಾಸಕ ಭರತ್ ಶೆಟ್ಟಿಯವರಿಗೆ ಹೊಟೇಲ್ ಅಸೋಸಿಯೇಷನ್ ನ ಪದಾಧಿಕಾರಿಗಳು ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆರೋಗ್ಯಅಧಿಕಾರಿ ಮಂಜಯ್ಯ ಶೆಟ್ಟಿ, ಗೌರವ ಅಧ್ಯಕ್ಷ ರಾಜ್ ಗೋಪಾಲ್ ರೈ, ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಕಾರ್ಯದರ್ಶಿ ನಿಶಾಂಕ್ ಸುವರ್ಣ, ಯುವ ಮೋರ್ಚಾ ಅಧ್ಯಕ್ಷ ಸಚಿನ್ ರೈ, ಅಬ್ರಾರ್, ಡಾಕ್ಟರ್ ಜಗದೀಶ್, ಡಾಕ್ಟರ್ ವಿದ್ಯಾ, ಅಶೋಕ್, ವಿಕಾಸ್, ರೂಪೇಶ್ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق