ಹೊಸದಿಲ್ಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಸ್ಟೈಲ್ ನಿಂದಲೂ ಫೇಮಸ್ ಆದವರು. ಅವರು ಮಾಡುವ ಹೇರ್ ಸ್ಟೈಲ್ ಅನ್ನು ಯುವಕರು ಫಾಲೋ ಮಾಡುತ್ತಾರೆ.
ಆರಂಭದ ದಿನಗಳಲ್ಲಿ ಅವರು ಉದ್ದ ಕೂದಲ ಲುಕ್ ದೇಶದಲ್ಲಿ ಸಂಚಲನ ಉಂಟು ಮಾಡಿತ್ತು. ಇದೀಗ ಅವರು ಪತ್ನಿ ಮತ್ತು ಮಗಳ ಜೊತೆ ಫ್ಯಾಮಿಲಿ ಟೈಮ್ ಮಜಾದಲ್ಲಿರುವ ಧೋನಿಯ ಹೊಸ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಂದಿಗಿಂತಲೂ ಹೆಚ್ಚು ಎನಿಸುವಂತೆ ಮೀಸೆ ಇಟ್ಟಿರುವ ಧೋನಿಯ ಫೋಟೊ ವೈರಲ್ ಆಗಿದೆ.
ಮಗಳ ಜೊತೆ ಧೋನಿ ನಿಂತಿರುವ ಫೋಟೊ ವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಧೋನಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಚಿತ್ರಕ್ಕೆ ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
Post a Comment