ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಲಾಕ್‌ಡೌನ್‌ ಸಡಿಲಿಕೆ: ಉಡುಪಿ ಜನರಿಗೆ ಸ್ವಲ್ಪ ನಿರಾಳ

ಲಾಕ್‌ಡೌನ್‌ ಸಡಿಲಿಕೆ: ಉಡುಪಿ ಜನರಿಗೆ ಸ್ವಲ್ಪ ನಿರಾಳ


 

ಉಡುಪಿ: ಜಿಲ್ಲಾ ಶಾಸಕರುಗಳ ಗಮನಕ್ಕೆ ಯಾವುದೇ ಜನ ಸೇರುವ ಸೇರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಡಿ. ಲಾಕ್ ಡೌನ್ ನಿಂದಾಗಿ ಸಾಕಷ್ಟು ಮಂದಿಗೆ ಆರ್ಥಿಕ ಹೊಡೆತ ಬಿದ್ದಿದೆ. ಹಾಗಾಗಿ ನೀವು ಮಾಡಿಕೊಂಡ ಮನವಿ ಮೇರೆಗೆ  ಉಡುಪಿ ಲಾಕ್ ಡೌನ್ ಸಡಿಲಿಸಿ ಹಗಲು ಹೊತ್ತಿನ ವ್ಯವಹಾರಕ್ಕೆ ಸ್ವಲ್ಪ ಮಟ್ಟಿನ ಅನುಕೂಲ  ಮಾಡಿಕೊಟ್ಟಿದೆ.


ಇದು ಜನಸಾಮಾನ್ಯರಿಗೆ ಅಯ್ಯೇೂ ಬಡ ಜೀವ ಉಳಿಯಿತು ಅನ್ನುವಷ್ಟರ  ಮಟ್ಟಿಗೆ ಕುಶಿ ಕೊಟ್ಟಿದೆ. ಆದರೂ ಕೊರೊನ ವೆೈರಾಣುಗಳ ನಡುವೆ ಜೀವಿಸ ಬೇಕಾದ ಅನಿವಾರ್ಯತೆ ಇದೆ ಅನ್ನುವುದನ್ನು ಯಾರು ಮರೆಯುವಂತಿಲ್ಲ. ಈ ಸಂದರ್ಭದಲ್ಲಿ ನಮ್ಮ ಶಾಸಕರುಗಳಿಗೆ ನಮ್ಮ ನಿವೇದನೆ ಅಂದರೆ ತಾವುಗಳು ಯಾವುದೇ ಜನ ಸೇರಿಸುವ ಕಾಯ೯ಕ್ರಮಗಳಿಗೆ ಅವಕಾಶ ಮಾಡಿ ಕೊಡಲೇ ಬಾರದು.


ನೀವುಗಳು ಮಾಡುವ ಕಾರ್ಯ ಚಟುವಟಿಕೆಗಳು ಉತ್ತಮವಾಗಿರುತ್ತದೆ.ಆದರೆ ಅದನ್ನು ಜನ ಸೇರಿಸದೇ ಮಾಡಲು ಸಾಧ್ಯವಿದೆ ಅನ್ನುವುದು ಕೂಡಾ ಅಷ್ಟೇ ಸತ್ಯ.ಇತ್ತೀಚಿನ ದಿನಗಳಲ್ಲಿ ಬಹುಮುಖ್ಯವಾಗಿ ಉಡುಪಿ ಜಿಲ್ಲಾ ಕೇಂದ್ರದ ಕಾರ್ಯಕ್ರಮಗಳಲ್ಲಿ ಜನ ಸಂದಣಿಯಾಗಿರುವುದು ಎಲ್ಲರ ಗಮನಕ್ಕೂ ಬಂದಿದೆ.ಮದುವೆ ಮುಂತಾದ ಕಾರ್ಯಕ್ರಮಗಳ ಮೇಲೆ ಬಿಗುವಾದ ನಿಯಂತ್ರಣ ಹಾಕಿ ಹದ್ದುಬಸ್ತಿನಲ್ಲಿ ಅಧಿಕಾರಿಗಳು ಇಟ್ಟಿರುವಾಗ ಶಾಸಕರುಗಳು/ಸರ್ಕಾರ ಮಾಡುವ ಕಾಯ೯ಗಳಿಗೆ ನೂರಾರು ಜನ ಸೇರಲು ಅವಕಾಶ ಮಾಡಿಕೊಟ್ಟಿರುವುದು ಸರಿಯೇ? ಅನ್ನುವ ಪ್ರಶ್ನೆ ಜನಸಾಮಾನ್ಯರ  ಮನಸ್ಸಿನಲ್ಲಿ ಮೂಡಿಬಂದಿರುವುದು ಅಷ್ಟೇ ಸತ್ಯ. ಇದು ಕೆಟ್ಟ ಸಂದೇಶವನ್ನು ರವಾನಿಸುತ್ತದೆ.  



ಶಾಸಕರು ಸಂಸದರು ಈ ಕಾಯ೯ಕ್ರಮಗಳನ್ನು ಹಮ್ಮಿಕೊಂಡ ಕಾರಣ ಅದನ್ನು ತಡೆಯುವುದು ಕೂಡಾ ಅಧಿಕಾರಿಗಳಿಗೆ ಅಷ್ಟೇ ಕಷ್ಟದ ಕೆಲಸವೂ ಹೌದು.ಕೊನೆಗೂ ಕೆಟ್ಟ ಮಾತುಗಳನ್ನು ಕೇಳ ಬೇಕಾದದ್ದು ಈ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಅನ್ನುವುದನ್ನು ತಾವು ಮರೆಯ ಬಾರದು.ಇದಕ್ಕೆ ಜನರಿಗೆ ಉತ್ತರಿಸಲಾಗದ ಸ್ಥಿತಿಗೆ ಅಧಿಕಾರಿಗಳು ಬಂದು ನಿಲ್ಲುತ್ತಾರೆ.


ನಮ್ಮ ಶಾಸಕರುಗಳು ಗಮನಿಸ ಬೇಕಾದ ಇನ್ನೊಂದು ಪ್ರಮುಖ ಎಚ್ಚರಿಕೆ ಮಾತೆಂದರೆ; ಒಂದು ವೇಳೆ ಮೂರನೇ ಕೊರೊನ ಆಲೆ ಅಬ್ಬರಿಸಿ ಬಂತೆಂದರೆ ಕೊನೆಗೂ ಈ ವ್ಯಾಪಾರಸ್ಥರು; ಜನ ಸಾಮಾನ್ಯರು; ವಿಪಕ್ಷದವರು ಬೊಟ್ಟುಮಾಡಿ ಕೆೈ ತೇೂರಿಸುವುದು ನಿಮ್ಮ ಕಡೆಗೆ ಅನ್ನುವುದನ್ನು ನೀವು ಮರೆಯ ಬಾರದು.


ಒಟ್ಟಿನಲ್ಲಿ ಮೂರನೇ ಅಲೆ ಉಡುಪಿ ಜಿಲ್ಲೆಯಲ್ಲಿ ಬಾರದ ಹಾಗೇ ತಡೆಗಟ್ಟುವಲ್ಲಿ ಜನರ ಪಾತ್ರ ಎಷ್ಟು ಮುಖ್ಯವೊ ಅದಕ್ಕಿಂತಲೂ ಮುಖ್ಯ ವಾದದ್ದು ನಮ್ಮ ಜನ ಪ್ರತಿನಿಧಿಗಳದ್ದು ಅನ್ನುವುದು ಜನ ಸಾಮಾನ್ಯರ ವಿನಮ್ರ ಮನವಿ.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

(ಉಪಯುಕ್ತ ನ್ಯೂಸ್)

0 Comments

Post a Comment

Post a Comment (0)

Previous Post Next Post