ಮಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗ ಸಮುದಾಯದಲ್ಲಿ ಹರಡುತ್ತಿರುವಾಗ ಸಮಾಜವನ್ನು ರಕ್ಷಿಸುವ ಸಲುವಾಗಿ ಕೋವಿಡ್-19 ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕರನ್ನು ಗುರುತಿಸಿ ರೇಷನ್ ಕಿಟ್ ನೀಡಿದ ಮಲಬಾರ್ ಗೋಲ್ಡ್ & ಡೈಮಂಡ್ ಇದರ ಪದಾಧಿಕಾರಿಗಳಿಗೆ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು ಅವರು ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾದೇಷ್ಟರು ಮಾತನಾಡಿ, ತಮ್ಮ ವೈಯಕ್ತಿಕ ಸುಖ ದು:ಖಗಳನ್ನು ಬದಿಗೊತ್ತಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಗೃಹರಕ್ಷಕರ ಪಾತ್ರ ಬಹಳ ದೊಡ್ಡದು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಜೊತೆ ಗೃಹರಕ್ಷಕರು ನಿರಂತರ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ತ್ಯಾಗದ ಸೇವೆಯನ್ನು ಗುರುತಿಸಿ ರೇಷನ್ ಕಿಟ್ ನೀಡಿದ ಕಾರಣದಿಂದ ಗೃಹರಕ್ಷಕರು ಮತ್ತಷ್ಟು ಹುರುಪಿನಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಮಲಬಾರ್ ಗೋಲ್ಡ್ & ಡೈಮಂಡ್ ಮಂಗಳೂರು ಮಾರ್ಕೆಟಿಂಗ್ ಮ್ಯಾನೇಜರ್ ಫರ್ತಾನ್ ಇವರು 45 ಗೃಹರಕ್ಷಕರಿಗೆ ರೇಷನ್ ಕಿಟ್ ವಿತರಿಸಿ ಮಾತನಾಡಿ, ಗೃಹರಕ್ಷಕರು ಮಾಡಿದ ಸೇವೆಗೆ ನಮ್ಮದು ಕಿಂಚಿತ್ ಅಳಿಲು ಸೇವೆ ಎಂದು ನುಡಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಶರತ್ ಚಂದ್ರನ್ (ಸ್ಟೋರ್ ಹೆಡ್- ಮಲಬಾರ್ ಗೋಲ್ಡ್ & ಡೈಮಂಡ್ ಮಂಗಳೂರು), ಹಾಗೂ ಕಾರ್ತಿಕ್ ಕುಮಾರ್ (ಗೆಸ್ಟ್ ರಿಲೇಷನ್ ಮ್ಯಾನೇಜರ್ ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು) ಇವರುಗಳು ಉಪಸ್ಥಿತರಿದ್ದರು.
ಅಡಂಕುದ್ರುವಿನಲ್ಲಿರುವ ಸರಕಾರಿ ಸೈಂಟ್ ಜೋಸೆಫ್ ಶಾಲಾ ವಠಾರದಲ್ಲಿ ಸೋಮವಾರ ಈ ಸರಳ ಸಮಾರಂಭ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರಭಾರ ಘಟಕಾಧಿಕಾರಿಯವರಾದ ಭಾಸ್ಕರ್ ಎಂ. ಇವರು ವಂದನಾರ್ಪಣೆ ಮಾಡಿದರು. ಉಳ್ಲಾಲ ಘಟಕದ ಗೃಹರಕ್ಷಕರಾದ ಸುನಿಲ್ ಹಾಗೂ ಸುಮಾರು 45 ಗೃಹರಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
إرسال تعليق