ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ಳಾರೆ ಗೃಹರಕ್ಷಕ ದಳ ವನಮಹೋತ್ಸವ ಮತ್ತು ಸೊಳ್ಳೆ ಪರದೆ ವಿತರಣೆ

ಬೆಳ್ಳಾರೆ ಗೃಹರಕ್ಷಕ ದಳ ವನಮಹೋತ್ಸವ ಮತ್ತು ಸೊಳ್ಳೆ ಪರದೆ ವಿತರಣೆ


ಸೊಳ್ಳೆ ಪರದೆ ಬಳಸಿ ಸಾಂಕ್ರಾಮಿಕ ರೋಗ ತಡೆಗಟ್ಟಿ:  ಡಾ|| ಚೂಂತಾರು 


ಬೆಳ್ಳಾರೆ:-  ಗ್ರಾಮೀಣ ಪ್ರದೇಶಗಳಲ್ಲಿ ಈ ಮಳೆಗಾಲ ಸೊಳ್ಳೆಗಳ ಕಾಟ ಜೋರಾಗಿದ್ದು ಡೆಂಗ್ಯೂ, ಚಿಕನ್‍ಗುನ್ಯಾ, ಮಲೇರಿಯಾ ರೋಗದ ಹಾವಳಿ ಹೆಚ್ಚಾಗಿದೆ. ಅಲ್ಲಲ್ಲಿ ನಿಂತ ನೀರಲ್ಲಿ ಸೊಳ್ಳೆ ವಂಶಾಭಿವೃದ್ದಿ ಮಾಡಿಕೊಂಡು ರೋಗವಾಹಕವಾಗಿ ಕೆಲಸ ಮಾಡಿ ರೋಗ ಹರಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ.

 


ಗ್ರಾಮೀಣ ಪ್ರದೇಶಗಳಲ್ಲಿ ತೋಟ, ಗುಡ್ಡಗಳಲ್ಲಿ ಕೆಲಸ ಮಾಡುವಾಗ ಮೈಮುಚ್ಚುವ ಬಟ್ಟೆ ಧರಿಸಿಕೊಳ್ಳಬೇಕು ಮತ್ತು ರಾತ್ರಿ ಹೊತ್ತು ಕಡ್ಡಾಯವಾಗಿ ಸೊಳ್ಳೆ ಪರದೆ ಬಳಸಬೇಕು ಹಾಗೆ ಮಾಡಿದಲ್ಲಿ ಸೊಳ್ಳೆಗಳ ಕಾಟದಿಂದ ಪಾರಾಗಿ ಸಾಂಕ್ರಾಮಿಕ ರೋಗ ತಡೆಗಟ್ಟಬಹುದು ಎಂದು ದ.ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು. 


 ಬೆಳ್ಳಾರೆಯ ಗೃಹರಕ್ಷಕ ದಳದ ವತಿಯಿಂದ ವನಮಹೋತ್ಸವ ಮತ್ತು ಸೊಳ್ಳೆ ಪರದೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬೆಳ್ಳಾರೆ ಘಟಕದ ಗೃಹರಕ್ಷಕರಿಗೆ ಉಚಿತವಾಗಿ ಗಿಡ ಹಂಚಲಾಯಿತು ಮತ್ತು ಆರೋಗ್ಯ ಇಲಾಖೆಯಿಂದ ನೀಡಿದ ಸೊಳ್ಳೆ ಪರದೆಗಳನ್ನು ವಿತರಿಸಲಾಯಿತು. ಬೆಳ್ಳಾರೆ ಘಟಕದ ಘಟಕಾಧಿಕಾರಿ ಶ್ರೀ ವಸಂತ್, ಹಿರಿಯ ಗೃಹರಕ್ಷಕರಾದ ಹೂವಪ್ಪ, ದೇವಿ ಪ್ರಸಾದ್, ಅಶ್ವಿನಿ, ದಿವಾಕರ್, ದುಶ್ಯಾಂತ್ ಮುಂತಾದವರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 Comments

Post a Comment

Post a Comment (0)

Previous Post Next Post