ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಂತೆ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಜೂನ್ 22ರಿಂದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಇದು ಜೂನ್ 27ರವರೆಗೆ ಮುಂದುವರಿಯಲಿದೆ. ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 4.00ರವರೆಗೆ ಲಸಿಕೆ ನೀಡಲಾಗುತ್ತದೆ. ಪ್ರಾರಂಭದ ಈ ದಿನ 100 ಕೋವಿಶೀಲ್ಡ್ ಹಾಗೂ 40 ಕೋವ್ಯಾಕ್ಷಿನ್ ಲಸಿಕೆ ನೀಡಲಾಯಿತು.
ಕೋವ್ಯಾಕ್ಷಿನ್ ಮತ್ತು ಕೋವಿಶೀಲ್ಡ್ ಎರಡೂ ಲಸಿಕೆಗಳು ಲಭ್ಯವಿದ್ದು, ಕೋವ್ಯಾಕ್ಷಿನ್ 1200 ರೂಪಾಯಿ ಮತ್ತು ಕೋವಿಶೀಲ್ಡ್ 780 ರೂಪಾಯಿ ದರಗಳಲ್ಲಿ ಲಸಿಕೆಗಳು ದೊರೆಯಲಿವೆ. ಆಸಕ್ತರು ತಮ್ಮ ಹೆಸರು, ಆಧಾರ್ ನಂಬರ್, ನೀವು ಬಯಸುವ ಲಸಿಕೆ ಹೆಸರು ಮತ್ತು ಎಷ್ಟನೇ ಡೋಸ್ ಎಂದು ನಮೂದಿಸಿ 9071145369 ಈ ಮೊಬೈಲ್ ನಂಬರಿಗೆ ಎಸ್.ಎಂ.ಎಸ್ ಕಳುಹಿಸಬೇಕಾಗುತ್ತದೆ.
ಲಸಿಕೆ ನೀಡುವ ದಿನಾಂಕವನ್ನು ನೋಂದಾಯಿತರಿಗೆ ತಿಳಿಸಲಾಗುತ್ತದೆ. ಆಧಾರ್ ಕಾರ್ಡಿನೊಂದಿಗೆ ನಿಗದಿಪಡಿಸಿದ ದಿನದಂದು ಉಜಿರೆ ಎಸ್.ಡಿ.ಎಂ ಆಸ್ಪತ್ರೆಗೆ ಬಂದು ಲಸಿಕೆ ಪಡೆಯಬಹುದು ಎಂದು ಆಸ್ಪತ್ರೆಯ ನಿರ್ದೇಶಕರು ತಿಳಿಸಿದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق